Select Your Language

Notifications

webdunia
webdunia
webdunia
webdunia

ಕಾಂಗ್ರೆಸ್ ವಿರುದ್ಧ ಕಿಡಿಕಾರಿದ ಛಲವಾದಿ ನಾರಾಯಣ ಸ್ವಾಮಿ

ಕಾಂಗ್ರೆಸ್ ವಿರುದ್ಧ ಕಿಡಿಕಾರಿದ ಛಲವಾದಿ ನಾರಾಯಣ ಸ್ವಾಮಿ
bangalore , ಸೋಮವಾರ, 17 ಜುಲೈ 2023 (17:24 IST)
ಇಂದು ಬೆಂಗಳೂರಿನಲ್ಲಿ ರಾಷ್ಟ್ರದ ಎಲ್ಲಾ ವಿಪಕ್ಷಗಳ ಮಹಾಘಟಬಂಧನ್ ಸಭೆ ಸೇರುತ್ತಿದ್ದಾರೆ ಎಂದು ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಹೇಳಿದ್ದು,ಈ ಮಹಾ ಘಟಬಂಧನ್ ಯಾವ ಕಾರಣಕ್ಕೆ ಅನ್ನೋದು ಅವರಿಗೆ ಗೊತ್ತಿಲ್ಲ.ಇದು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮೋದಿ ಅವರನ್ನ ಸೋಲಿಸಲು ಸೇರಿದ್ದಾರೆ.
 
ನಾನು ಬೆಂಗಳೂರಿನಲ್ಲಿ ನೋಡಿದೆ.ಯುನೈಟೆಡ್ ವಿ ಸ್ಟಾಂಡ್ ಅಂತ ಬರ್ಕೊಂಡ್ ಫೋಟೋ ಹಾಕ್ಕೊಂಡಿದ್ದೇವೆ.ಯುನೈಟೆಡ್ ವಿಬಸ್ಟಾಂಡ್ ಅಂದ್ರೇನು.ಒಂದಾಗೋಕೆ ಇವರ ನೀತಿ, ಸಿದ್ದಾಂತ ಒಂದೇ ಇದೆಯೇ.?ಹಾಗಿದ್ರೆ ಯಾವ ಸ್ಟ್ಯಾಂಡ್ ಮೇಲೆ ನಿಲ್ತಾರೆ.?ಈ ದೇಶವನ್ನು ಒಗ್ಗಟ್ಟಾಗಿ ನಡೆಸೋಕೆ ಯಾರ ವಿರೋಧ ಇಲ್ಲ.ಮೊದಲನೇದಾಗಿ ಮುಫ್ತಿ ಮೊಹಮದ್ ಮತ್ತಿತರರು ಬಂದಿದ್ದಾರೆ.ಅವರ ಸ್ಟ್ಯಾಂಡ್ ಪಾಕಿಸ್ತಾನಕ್ಕೆ ಸೇರಬೇಕು ಅನ್ನೋದು.ಮಮತಾ ಬ್ಯಾನರ್ಜಿಯವರು ಬಾಂಗ್ಲಾ ಜೊತೆ ಸೇರೋದು.ಇವರು ಬಂದಿರೋ ಎಲ್ಲರೂ ಕುತಂತ್ರ ಮಾಡೋಕೆ ಬಂದಿದ್ದಾರೆ.ಒಬ್ಬರಿಗೊಬ್ಬರಲ್ಲಿ ವಿಶ್ವಾಸ ಇಲ್ಲದವರು ಇವರು.ಮಳೆಗಾಲದಲ್ಲಿ ಹಣಬೆ ರೀತಿ ಬೆಳೆದಿದ್ದಾರೆ.ಸ್ವಲ್ಪ ದಿನ ಕಳೆದ ಬಳಿಕ ಅವರೇ ಚದುರಿಹೋಗ್ತಾರೆ.ಬೆಂಗಳೂರು ವೆದರ್ ಚೆನ್ನಾಗಿದೆ ಅಂತ ಟೂರ್ ಬಂದಿದ್ದಾರೆ.65 ವರ್ಷ ಈ ದೇಶ ಆಳಿದ ಕಾಂಗ್ರೆಸ್ ಅಸ್ತಿತ್ವ ಕಳೆದುಕೊಂಡಿದೆ‌
 
ರಾಹುಲ್ ಗಾಂಧಿ ನೇತೃತ್ವದಲ್ಲಿ ಬರ್ತಿದ್ದಾರೆ.ಇಂದು ಅವರು ಸಂಸದರೂ ಕೂಡ ಅಲ್ಲ.ಈ ದೇಶವನ್ನ ಹರಾಜಿಗೆ ಇಡಲು ಪ್ರಯತ್ನ ಪಡ್ತಿದ್ದೀರಿ‌.ನೀವು ಚೌಚೌ ಗಿರಾಕಿಗಳು.ಬಂದಿರೋದು ಅತಿಥಿಗಳು ಅಂತ ಬಾವಿಸಿದ್ದಾರೆ.ಬಂದಿರೋರನ್ನ ಕರ್ನಾಟಕ ಸರ್ಕಾರ ನೋಡಿಕೊಳ್ತಿದೆ.ಅವರ ಖರ್ಚು ವೆಚ್ಚ ಯಾರು ನೋಡಿಕೊಳ್ತಿದ್ದಾರೆ.??ನಮ್ಮ ತೆರಿಗೆ ಹಣದಲ್ಲಿ ಖರ್ಚು ಮಾಡಿದ್ರೆ ನಾವು ವಿರೋಧ ಮಾಡ್ತೀವಿ.ಇದು ಖಾಸಗಿ ಕಾರ್ಯಕ್ರಮ.ಖಾಸಗಿಯಾಗೆ ಹಣ ಖರ್ಚು ಮಾಡಲಿ.ಇಲ್ಲದಿದ್ರೆ ಸಿಎಂಗೆ ಎಚ್ಚರಿಕೆ ಕೊಡ್ತೀವಿ, ಪರಿಣಾಮ ಎದುರಿಸ್ತೀರಿ.
 
ಈಗ ಮಳೆ ಕೊರತೆ ಎದುರಾಗಿದೆ.ಕುಡಿಯುವ ನೀರಿನ ಸಮಸ್ಯೆ ಕೂಡ ಎದುರಾಗಿದೆ.ಇದೆಲ್ಲವನ್ನೂ ಸದನದಲ್ಲಿ ಗಮನ ಸೆಳೆಯುವ ಕೆಲಸ ಮಾಡ್ತೀವಿ.ಸಿದ್ದರಾಮಯ್ಯ ಅವರ ಸರ್ಕಾರ ಜನರ ಎಲ್ಲರ ಆಶೋತ್ತರಗಳಿಗೆ ಕಲ್ಲು ಹಾಕಿದೆ ಎಂದು ಛಲವಾದಿ ನಾರಾಯಣ ಸ್ವಾಮಿ ಕಿಡಿಕಾರಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಿಎಂ ಸಿದ್ದರಾಮಯ್ಯ ನಿವಾಸದ ಎದುರು ಪ್ರತಿಭಟನೆ