Webdunia - Bharat's app for daily news and videos

Install App

ನಾಲ್ಕು ತಿಂಗಳಾದ್ರೂ ಉದ್ಘಾಟನೆಯಾಗದ ಪಾರ್ಕಿಂಗ್ ಕಾಂಪ್ಲೆಕ್ಸ್

Webdunia
ಸೋಮವಾರ, 30 ಜನವರಿ 2023 (20:01 IST)
ಕೋಟಿ ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಕಟ್ಟಡ. ಆದ್ರೆ ಅದರ ನಿರ್ವಹಣೆಗೆ 6 ಬಾರಿ ಟೆಂಡರ್ ಕರೆದ್ರೂ ಯಾರೊಬ್ಬರು ಅತ್ತ ತಿರುಗಿ ನೋಡುತ್ತಿಲ್ಲ. ಸುಮಾರು 78 ಕೋಟಿ ವೆಚ್ಚದಲ್ಲಿ ನಿರ್ಮಿಸಿರೋ ಆ ಕಟ್ಟಡಕ್ಕೆ ಇನ್ನೂ ಉದ್ಘಾಟನೆ ಭಾಗ್ಯ ಒದಗಿಬಂದಿಲ್ಲ. ಪಾರ್ಕಿಂಗ್ ಕಟ್ಟಡ ಕಟ್ಟುವ ಮೊದಲೇ ಬಿಬಿಎಂಪಿ ಅಧಿಕಾರಿಗಳು ಇಟ್ಟ ಆ ಒಂದು ಹೆಜ್ಜೆ ಇದೀಗ ಕೋಟಿ ಕೋಟಿ ವೆಚ್ಚದ ಕಟ್ಟಡವನ್ನ ಧೂಳು ಹಿಡಿವಂತೆ ಮಾಡಿಬಿಟ್ಟಿದೆ. ಬೆಂಗಳೂರಿನ ಪ್ರತಿಭಟನೆಗಳ ಹಾಟ್ ಸ್ಪಾಟ್ ಅಂತಾನೇ ಫೇಮಸ್ ಆಗಿರೋ ಫ್ರೀಡಂ ಪಾರ್ಕ್ ಪಕ್ಕ ಸಾಗಿದ್ರೆ ಹೀಗೆ ಸಿಂಗಾರಗೊಂಡ ಕಟ್ಟಡವೊಂದು ನಿಮ್ಮ ಕಣ್ಣಿಗೆ ಬಿದ್ದೆ ಬೀಳುತ್ತೆ. ಅದು ಕಳೆದ 4 ತಿಂಗಳ ಹಿಂದೆ ಪಾಲಿಕೆ ವತಿಯಿಂದ 78 ಕೋಟಿ ವೆಚ್ಚದಲ್ಲಿ ಕಟ್ಟಿರೋ ಪಾರ್ಕಿಂಗ್ ಕಟ್ಟಡ. ಆದ್ರೆ ಕಟ್ಟಡ ಕಟ್ಟಿ 4 ತಿಂಗಳು ಕಳೆದ್ರೂ ಉದ್ಘಾಟನೆ ಭಾಗ್ಯ ಮಾತ್ರ ಇನ್ನೂ ಸಿಕ್ಕಿಲ್ಲ.
ಪಾರ್ಕಿಂಗ್ ಕಟ್ಟಡದ ನಿರ್ವಹಣೆಗೆ  ಕಳೆದ ಡಿಸೆಂಬರ್ನಿಂದಲೂ ಇದುವರೆಗೆ 6 ಬಾರೀ ಟೆಂಡರ್ ಕರೆಯಲಾಗಿದ್ರೂ ಯಾರೂ ಮುಂದೆ ಬರುತ್ತಿಲ್ಲ. ಇದರಿಂದ ಕೋಟಿ ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಈ ಕಟ್ಟಡಕ್ಕೆ ಬೀಗ ಹಾಕಲಾಗಿದ್ದು, ಧೂಳು ಹಿಡಿಯುತ್ತಿದೆ. ಗುತ್ತಿಗೆದಾರರು ಯಾಕೆ ಹಿಂದೇಟು ಹಾಕ್ತಿದ್ದಾರೆ ಅನ್ನೋದನ್ನ ಗಮನಿಸೋದಾದ್ರೆ.
 
 
-ಕಟ್ಟಡದಲ್ಲಿ ಸಿಸಿ ಕ್ಯಾಮರಾ, ಇ-ಟಿಕೆಟಿಂಗ್ ವ್ಯವಸ್ಥೆ, ಆಟೋ ಪೇ ಸಿಸ್ಟಂ ಇಲ್ಲ
-ಜನರಿಗೆ ಪಾರ್ಕಿಂಗ್ನಿಂದ ಹೊರಗೆ ಬರಲು ವಾಹನ ವ್ಯವಸ್ಥೆ ಮಾಡಬೇಕು
- ಸುತ್ತಮುತ್ತಲಿನ ರಸ್ತೆಯಲ್ಲಿ ಉಚಿತವಾಗಿ ವಾಹನ ನಿಲುಗಡೆಗೆ ಸ್ಥಳವಿದೆ
-ವಾಹನ ಮಾಲೀಕರು ಹಣ ಕೊಟ್ಟು ವಾಹನ ನಿಲುಗಡೆಗೆ ಬರೋದು ಕಷ್ಟ

 ಈ ಎಲ್ಲಾ ಸಮಸ್ಯೆಗಳಿರೋದರಿಂದ ಗುತ್ತಿಗೆದಾರರ ಪಾರ್ಕಿಂಗ್ ಕಟ್ಟಡದ ಟೆಂಡರ್ ಪಡೆಯೋಕೆ ಹಿಂದೇಟು ಹಾಕ್ತಿದ್ದಾರೆ. ಇತ್ತ ಗುತ್ತಿಗೆದಾರರು ಸಿಗದೇ ಇರೋದರಿಂದ 78 ಕೋಟಿ ವೆಚ್ಚದಲ್ಲಿ ಕಟ್ಟಲಾದ ಕಟ್ಟಡ ಬಳಕೆಗೆ ಬಾರದೇ ಧೂಳು ಹಿಡಿತಿದೆ. 60 ಪರ್ಸೆಂಟ್ ಬಾಡಿಗೆ ಕೊಡಬೇಕು ಅನ್ನೋ ಷರತ್ತಿನಿಂದ ಹೊಸ ಪಾರ್ಕಿಂಗ್ ಕಟ್ಟಡದ ಗುತ್ತಿಗೆ ಪಡೆಯೋಕೆ ಗುತ್ತಿಗೆದಾರರು ಹಿಂದೇಟು ಹಾಕ್ತಿದ್ದಾರೆ ಎನ್ನಲಾಗ್ತಿದೆ. ಸದ್ಯ ಬಿಬಿಎಂಪಿ ಕೂಡ ಈ ಷರತ್ತನ್ನ ತಿದ್ದುಪಡಿ ಮಾಡೋಕೆ ಚಿಂತನೆ ನಡೆಸ್ತಿದೆ

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments