Select Your Language

Notifications

webdunia
webdunia
webdunia
webdunia

ನ್ಯೂ ಗಾಂಧಿನಗರ ಬಳಿಯ ರೈಲ್ವೇ ಟ್ರ್ಯಾಕ್‍ ಮೇಲೆ ತಾಯಿ ಮಗನ ಶವ ಪತ್ತೆ

ನ್ಯೂ ಗಾಂಧಿನಗರ ಬಳಿಯ ರೈಲ್ವೇ ಟ್ರ್ಯಾಕ್‍ ಮೇಲೆ ತಾಯಿ ಮಗನ ಶವ ಪತ್ತೆ
ಬೆಳಗಾವಿ , ಬುಧವಾರ, 22 ಮೇ 2019 (10:00 IST)
ಬೆಳಗಾವಿ : ನ್ಯೂ ಗಾಂಧಿನಗರ ಬಳಿಯ ರೈಲ್ವೇ ಟ್ರ್ಯಾಕ್‍ ನ ಬಳಿ ತಾಯಿ ಹಾಗೂ ಮಗನ  ಶವ ಪತ್ತೆಯಾಗಿದ್ದು, ಕೊಲೆ ಮಾಡಿ ದೇಹವನ್ನು ರೈಲ್ವೇ ಹಳಿಗಳ ಮೇಲೆ ಎಸೆದಿದ್ದಾರೆ ಎಂದು ಶಂಕಿಸಲಾಗಿದೆ.




ರೇಣುಕಾ(35) ಹಾಗೂ ಲಕ್ಷಣ(8) ಮೃತರು ಎಂಬುದಾಗಿ ತಿಳಿದುಬಂದಿದ್ದು, ಮೃತಳ ಪತಿಯೇ ಇಬ್ಬರನ್ನು ಕೊಂದು ಹಳಿಯ ಮೇಲೆ ಶವ ಬಿಸಾಡಿದ್ದಾನೆಂದು ಆಕೆಯ ಕುಟುಂಬಸ್ಥರು ಆರೋಪಿಸಿದ್ದಾರೆ.  ಮೂಲತಃ ಜಿಲ್ಲೆಯ ಹುಕ್ಕೇರಿ ತಾಲೂಕಿನ ಬೀರನೋಳಿ ಗ್ರಾಮದ ನಿವಾಸಿಯಾಗಿರುವ ರೇಣುಕಾ ತರಕಾರಿ ಮಾರಿಕೊಂಡು ಮಹಿಳೆ ಜೀವನ ನಡೆಸುತ್ತಿದ್ದರು.


ಘಟನಾ ಸ್ಥಳಕ್ಕೆ ರೈಲ್ವೇ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಶವ ಬಿದ್ದಿರುವ ಹಳಿ ಪಕ್ಕದಲ್ಲಿ ರಕ್ತದ ಗುರುತು ಪತ್ತೆಯಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಮಾಲೀಕಳಿಗೆ ನೀರಿನಲ್ಲಿ ಮೂತ್ರ ಬೆರೆಸಿಕೊಡುತ್ತಿದ್ದ ಕೆಲಸದಾಕೆಯ ಗತಿ ಏನಾಯಿತು ಗೊತ್ತಾ?