Publish Date: Sun, 21 Jun 2020 (19:31 IST)
Updated Date: Sun, 21 Jun 2020 (19:33 IST)
ಕೊರೊನಾ ಸೋಂಕು ಹರಡುತ್ತಿರುವ ಕಾರಣದಿಂದ ಸಚಿವರೊಬ್ಬರು ತಮ್ಮ ಮನೆಯಲ್ಲಿ ಯೋಗ ಮಾಡಿದ್ದಾರೆ.
ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಸಚಿವ ಜಗದೀಶ್ ಶೆಟ್ಟರ್ ತಮ್ಮ ನಿವಾಸದಲ್ಲಿಯೇ ಯೋಗಾಭ್ಯಾಸ ನಡೆಸಿದರು.
ಕೊರೊನಾ ಸೋಂಕು ಹರಡುತ್ತಿರುವ ಕಾರಣ ಸಾಮಾಜಿಕ ಅಂತರದ ಜೊತೆಗೆ ಜನರ ಆರೋಗ್ಯದ ದೃಷ್ಟಿಯಿಂದ ತಮ್ಮ ತಮ್ಮ ಮನೆಯಲ್ಲಿಯೇ ಯೋಗಾಭ್ಯಾಸ ಮಾಡುವ ಮೂಲಕ ವಿಶ್ವ ಯೋಗ ದಿನಾಚರಣೆ ಆಚರಣೆ ಮಾಡಬೇಕೆಂಬ ಕಾರಣದಿಂದ ಸಚಿವರು ತಮ್ಮ ನಿವಾಸಿದಲ್ಲಿಯೇ ಯೋಗದ ವಿವಿಧ ಮುದ್ರೆಗಳನ್ನು ಮಾಡಿದರು.
ಭಾರತೀಯ ಮೂಲ ಪರಂಪರೆಯ ಯೋಗಾಭ್ಯಾಸವು ನಮಗೆ ಮಾನಸಿಕ ಹಾಗೂ ದೈಹಿಕವಾಗಿ ಸದೃಢವಾಗಿರಲು ಹೆಚ್ಚು ಸಹಕಾರಿಯಾಗಿದೆ. ಆರೋಗ್ಯಯುತ ಜೀವನಕ್ಕಾಗಿ ಎಲ್ಲರೂ ಯೋಗಾಭ್ಯಾಸ ರೂಢಿಸಿಕೊಳ್ಳಿ ಎಂದು ಶೆಟ್ಟರ್ ತಮ್ಮ ಫೇಸ್ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.