Publish Date: Mon, 01 Apr 2019 (19:40 IST)
Updated Date: Tue, 02 Apr 2019 (14:36 IST)
ಬಿಜೆಪಿ ಅಭ್ಯರ್ಥಿ ಎ.ಮಂಜು ವಿರುದ್ಧ ವಾಗ್ದಾಳಿ ನಡೆಸಿದ ಪ್ರಜ್ವಲ್ ರೇವಣ್ಣ ಎ.ಮಂಜು ಯಾವ ಮುಖ, ಸಿದ್ಧಾಂತ, ಯಾವ ಬದ್ಧತೆ ಇಟ್ಟುಕೊಂಡು ಮುಸ್ಲಿಮರ ಬಳಿ ಮತಯಾಚನೆ ಮಾಡ್ತಾಇದ್ದಾರೆ ಎಂದು ಕಿಡಿಕಾರಿದ್ದಾರೆ.
ಒಂದೆಡೆ ಅವರ ಪಕ್ಷ ದೇಶದಲ್ಲಿ ಹೊಡೆದಾಡಿಸುತ್ತಿದೆ. ಮುಸ್ಲಿಂ ವಿರೋಧಿ ಎಂದು ಅವರೇ ತೋರಿಸಿಕೊಂಡಿದ್ದಾರೆ. ಇವರಿಗೆ ವ್ಯಕ್ತಿತ್ವವು ಇಲ್ಲ, ಸಿದ್ದಾಂತವೂ ಇಲ್ಲ ಅಂತ ಹಾಸನದಲ್ಲಿ ಪ್ರಜ್ವಲ್ ರೇವಣ್ಣ ಟೀಕೆ ಮಾಡಿದ್ದಾರೆ.
ಎ.ಮಂಜು ಅವರನ್ನು 10 ವರ್ಷ ಶಾಸಕರನ್ನಾಗಿ, ಒಂದು ಬಾರಿ ಮಂತ್ರಿಯನ್ನಾಗಿ ಮಾಡಿದ್ದೀರಿ. ಆದ್ರೆ ಅವರು ಬಿಜೆಪಿ ಸೇರುವ ಮುನ್ನ ಮುಸ್ಲಿಂ ಬಾಂಧವರನ್ನು ಭೇಟಿ ಮಾಡಿದ್ದಾರಾ? ಮುಸ್ಲಿಂ ಸಮುದಾಯದಿಂದ ಅನುಮತಿ ಪಡೆದಿದ್ದಾರೆಯೇ..? ನಿಮ್ಮನ್ನು ಉಪಯೋಗಿಸಿಕೊಂಡು ಅಧಿಕಾರ ಅನುಭವಿಸಿ ಇವತ್ತು ನೀವು ಬೇಡ ಎಂದಿದ್ದಾರೆ ಅಂತ ಜರಿದಿದ್ದಾರೆ.