Select Your Language

Notifications

webdunia
webdunia
webdunia
webdunia

ಗರ್ಭಿಣಿ ಆ ನಿರ್ಧಾರ ಕೈಗೊಂಡಿದ್ದಾದ್ರೂ ಏಕೆ?

ಗರ್ಭಿಣಿ ಆ ನಿರ್ಧಾರ ಕೈಗೊಂಡಿದ್ದಾದ್ರೂ ಏಕೆ?
ನೆಲಮಂಗಲ , ಸೋಮವಾರ, 1 ಏಪ್ರಿಲ್ 2019 (19:33 IST)
ಅವಳು 22 ವರ್ಷದ ಗೃಹಿಣಿ, ನೋಡೋಕು ಸುಂದರವಾಗಿದ್ದವಳು ಕೆಲವು ದಿನಗಳ ಹಿಂದೆ ಗರ್ಭಿಣಿ ಆಗಿದ್ದಳು. ಆದರೆ…
ಅವರಿಬ್ಬರು ಕಳೆದ 6 ತಿಂಗಳ ಹಿಂದಷ್ಟೇ ಮದುವೆಯಾಗಿದ್ದರು. ಮೊದಮೊದಲಿಗೆ ಅನ್ಯೋನ್ಯವಾಗಿದ್ರು. ಕೆಲ ದಿನಗಳ ಹಿಂದೆ ಆಕೆ ಗರ್ಭಿಣಿ ಎನ್ನೋ ವಿಷಯವೂ ಮನೆಮಂದಿಗೆ ಗೊತ್ತಾಗಿದೆ. ಆದರೆ ಆ ಗರ್ಭಿಣಿ ಈಗ ಬಾರದ ಲೋಕಕ್ಕೆ ಹೋಗಿದ್ದಾಳೆ.

ಪತಿಯ ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಗರ್ಭಿಣಿಯಾಗಿದ್ದ ಪತ್ನಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಕಿರುಕುಳಕ್ಕೆ ಬೇಸತ್ತು ಮನೆಯ ಪ್ಯಾನಿಗೆ ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಬೆಂಗಳೂರು ಹೊರವಲಯ ಮಾದನಾಯಕನಹಳ್ಳಿಯ ಗಂಗೊಂಡಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ.

ಲಕ್ಷ್ಮಿದೇವಿ (22) ಮೃತ ದುರ್ದೈವಿಯಾಗಿದ್ದಾರೆ.

ಕಳೆದ 6 ತಿಂಗಳ ಹಿಂದೆಯಷ್ಟೆ  ದೇವರಾಜ್ ಎಂಬುವರ ಜತೆ   ಮದುವೆಯಾಗಿದ್ದರು ಲಕ್ಷ್ಮೀದೇವಿ. ಪತಿ ದೇವರಾಜ್ ಹಣ, ಒಡವೆಗಾಗಿ ಬೇಡಿಕೆ ಇಟ್ಟು ಕಿರುಕುಳ ನೀಡುತ್ತಿದ್ದ ಎಂದು ಮೃತಳ ಪೋಷಕರ ಅರೋಪವಾಗಿದೆ.

ಅತ್ತೆ ಜಯಮ್ಮ, ಮಾವ ಸಿದ್ದಗಂಗಪ್ಪ ನಾಪತ್ತೆಯಾಗಿದ್ದು, ಪತಿ ದೇವರಾಜು ಸದ್ಯ ಪೊಲೀಸರ ವಶದಲ್ಲಿದ್ದಾರೆ.  




Share this Story:

Follow Webdunia kannada

ಮುಂದಿನ ಸುದ್ದಿ

ಸಿನಿಮಾ ಶೂಟಿಂಗ್ ನಲ್ಲಿ ಸ್ಫೋಟ ಪ್ರಕರಣ; ಟವರ್ ಏರಿದ ಮನೆಮಂದಿ