Publish Date: Mon, 01 Apr 2019 (18:10 IST)
Updated Date: Tue, 02 Apr 2019 (14:37 IST)
ಸಿಂಪಥಿ ಗೈನ್ ಮಾಡೋಕ್ಕೋಗಿ ಜಿಲ್ಲಾಧಿಕಾರಿಗಳ ತೇಜೋವಧೆ ಮಾಡಲು ಹೊರಟಿದ್ದಾರೆ. ಜಿಲ್ಲಾಧಿಕಾರಿಗಳನ್ನು ವರ್ಗಾವಣೆ ಮಾಡಿಸಿ ತಮಗೆ ಬೇಕಾದವರನ್ನ ಹಾಕಿಸಿಕೊಳ್ಳಲು ಪಕ್ಷೇತರ ಅಭ್ಯರ್ಥಿ ಸುಮಲತಾ ಪಿತೂರಿ ನಡೆಸುತ್ತಿದ್ದಾರೆ ಎಂದು ದೂರಲಾಗಿದೆ.
ಮಂಡ್ಯದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್ ಸುದ್ದಿಗೋಷ್ಠಿನಡೆಸಿದ್ದು, ಪಕ್ಷೇತರ ಹಾಗೂ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿರುವ ಸುಮಲತಾ, ಮೈತ್ರಿ ಅಭ್ಯರ್ಥಿ ಬಗ್ಗೆ ಮಾತನಾಡಿರೋದನ್ನ ಖಂಡಿಸ್ತೇವೆ. ಇಂದಿನ ಕೇಬಲ್ ಕಟ್ ವಿಚಾರಕ್ಕೂ ನಮಗೂ ಯಾವುದೇ ಸಂಬಂದವಿಲ್ಲ. ಕೇಬಲ್ ಕಟ್ ಮಾಡಿಸಲು ನಾವ್ಯಾರು, ಅಂತಹ ರಾಜಕಾರಣ ನಾವು ಮಾಡಲ್ಲ ಎಂದರು.
ಪಕ್ಷೇತರ ಅಭ್ಯರ್ಥಿ ಏಜೆಂಟ್ ಅವರು ಮೊದಲೇ ಅಬ್ಜೆಕ್ಷನ್ ಮಾಡಿದ್ದೆ ಎಂದಿದ್ದಾರೆ. ಅದು ಶುದ್ದ ಸುಳ್ಳು, ನಾಮಪತ್ರ ಅಂಗೀಕಾರ ಆದ್ಮೇಲೆ ಅವರು ಅಬ್ಜಕ್ಷನ್ ಮಾಡಿದ್ದು. ಅಫಿಡೆವಿಟ್ ಕ್ಲಿಯರ್ ಆಗಿದ್ದು, ಅಂಗೀಕಾರ ಆದ ತಕ್ಷಣ ನಾವು ಹೊರಗೆ ಬಂದಿದ್ದೇವೆ ಎಂದರು.
ಸುಮಲತಾ ಅಕ್ಕನವರು ಯಾವಾಗಲೂ ಮಂಡ್ಯ ಜನರು ಮುಟ್ಟಾಳರಲ್ಲ ಅಂತಿರ್ತಾರೆ. ದಯಮಾಡಿ ಈ ಪದವನ್ನು ಅವರು ಉಪಯೋಗಿಸೋದು ತಪ್ಪು. ಈವರೆಗೆ ಜೆಡಿಎಸ್ ಗೆ ಮತ ಹಾಕಿದ ಜಿಲ್ಲೆಯ ಜನತೆ ಮುಟ್ಟಾಳರಾ ?
ಜಿಲ್ಲೆಯ ಜನತೆ ಮುಟ್ಟಾಳರಲ್ಲ ಮುಗ್ದರು ಅಂತಾರೆ. ಜೆಡಿಎಸ್ ಜಿಲ್ಲೆಯ ಅಭಿವೃದ್ದಿಗಾಗಿ ರಾಜಕಾರಣ ಮಾಡ್ತಿದೆ
ಶೋಕಿ ಮಾಡಲು ಅಲ್ಲ ಎಂದು ತಿರುಗೇಟು ನೀಡಿದ್ದಾರೆ.