Select Your Language

Notifications

webdunia
webdunia
webdunia
webdunia

ಹತ್ತು ದಿನದ ಹಿಂದೆ ಕಾಣೆಯಾಗಿದ್ದ ವ್ಯಕ್ತಿ ಕೊಲೆಯಾಗಿ ಪತ್ತೆ

A man who was missing ten days ago was found murderedA man who was missing ten days ago was found murdered
bangalore , ಸೋಮವಾರ, 23 ಜನವರಿ 2023 (18:45 IST)
ಹತ್ತು ದಿನದ ಹಿಂದೆ ಆ ವ್ಯಕ್ತಿ ಕಾಣೆಯಾಗಿದ್ದರು ಈ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು...‌ ಆದರೆ ಇದೀಗ ಕಾಣೆ ಪ್ರಕರಣಕ್ಕೆ ಟ್ವಿಸ್ಟ್ ದೊರೆತಿದ್ದು ವ್ಯಕ್ತಿಯನ್ನು ಕೊಲೆ ಮಾಡಿ ಜಮೀನಿನಲ್ಲಿ ಹೂತಿಡಲಾಗಿದೆ ಇದೀಗ ಶೋಪರಿಷಗಾಗಿ ಪೊಲೀಸರು ಶವವನ್ನು ಹೊರತೆಗೆಯುವ ಕೆಲಸಕ್ಕೆ ಮುಂದಾಗಿದ್ದಾರೆ. ವ್ಯಕ್ತಿ ಹೆಸರು ನಂದೀಶ್ ಹೊಸಕೋಟೆ ತಾಲೂಕಿನ ದೊಡ್ಡ ನಲ್ಲೂರಹಳ್ಳಿ ಗ್ರಾಮದ ವಾಸಿ 10 ದಿನದ ಹಿಂದೆ ಕಾಣೆಯಾಗಿದ್ದ ನಂದೀಶ್ ಇದೀಗ ಮೃತದೇಹವಾಗಿ ಪತ್ತೆಯಾಗಿದ್ದಾರೆ ಪಕ್ಕದ ಗ್ರಾಮದ ಪ್ರತಾಪ್ ಎಂಬವರಿಂದ ದಾರುಣವಾಗಿ ಹತ್ಯೆಗೀಡಾಗಿ ಮಾಲೂರು ಸಮೀಪದ ಬೈರನಹಳ್ಳಿ ಗ್ರಾಮದ ಜಮೀನಿನಲ್ಲಿ ಹೂತಿಡಲಾಗಿತ್ತು ಪೊಲೀಸರ ತನಿಕೆಯಿಂದ ವಿಷಯ ಹೊರಬಂದಿದ್ದು ಇದೀಗ ನಂದೀಶ್ ಮೃತ ದೇಹವನ್ನು ಪೊಲೀಸರು ಹೊರತೆಗೆದು ಶವ ಪರೀಕ್ಷೆಗೆ ರವಾನಿಸಿದ್ದಾರೆ
.
ನಂದೀಶ್ ಕೆಲ ಕಂಪನಿಗಳಲ್ಲಿ ಲೇಬರ್ ಕಾಂಟ್ರಾಕ್ಟರ್ ಆಗಿ ಕೆಲಸವನ್ನು ಮಾಡುತ್ತಿದ್ದರು ಸಾಕಷ್ಟು ಮಂದಿಗೆ ಕೆಲಸ ಕೊಡಿಸಿ ನೆರವಾಗಿದ್ದಾರೆ ಎಂಬ ಮಾತು ಸಹ ಕೇಳಿ ಬಂದಿದೆ ಕಳೆದ ಶುಕ್ರವಾರ ನಾಲ್ಕು ಲಕ್ಷ ಹಣವನ್ನು ತೆಗೆದುಕೊಂಡು ಕಾರ್ಮಿಕರಿಗೆ ನೀಡುವ ಸಲುವಾಗಿ ನಂದೀಶ್ ಮನೆಯಿಂದ ಹೊರಟಿದ್ದರು ಎಂದು ತಿಳಿದುಬಂದಿದ್ದು ಹಣದ ವಿಚಾರಕ್ಕೂ ಅಥವಾ ವೈಯಕ್ತಿಕ ವಿಚಾರಕ್ಕೂ ನಂದೀಶ್ ದಾರುಣವಾಗಿ ಕೊಲೆಯಾಗಿದ್ದಾರೆ ತನಿಕೆಯ ನಂತರ ಕೊಲೆಗೆ ನಿಖರವಾದ ಕಾರಣ ಹೊರ ಬರಬೇಕಿದೆ ನಂದೀಶ್ ಸಾವಿಗೆ ನ್ಯಾಯವನ್ನು ಕುಡಿಸಬೇಕೆಂದು ನಂದೀಶ್ನ ಸಂಬಂಧಿಕರು ಕೇಳಿಕೊಳ್ಳುತ್ತಿದ್ದಾರೆ.ವೈಯಕ್ತಿಕ ದ್ವೇಷವು ಅಥವಾ ಹಣದ ವಿಚಾರಗಳು ತಿಳಿದಿಲ್ಲ ಆದರೆ ನಂದೀಶ್ ಕುಟುಂಬ ಅವರನ್ನೇ ನಂಬಿಕೊಂಡು ಜೀವನವನ್ನು ಸಾಗಿಸುತ್ತಿತ್ತು ಇದೀಗ ಕುಟುಂಬಕ್ಕೆ ಆಧಾರವಾಗಿದೆ ನಂದೀಶ್ ಸಾವನ್ನಪ್ಪಿದ್ದು ನಂದೀಶ್ ಅವರ ಕುಟುಂಬಕ್ಕೆ ಪೊಲೀಸರ ತನಿಕೆಯಿಂದ ನ್ಯಾಯವನ್ನು ಕೊಡಿಸಬೇಕಿದೆ.
 

Share this Story:

Follow Webdunia kannada

ಮುಂದಿನ ಸುದ್ದಿ

ನಾಳೆ ಬಸ್ ಗಳ ಸೇವೆಯಲ್ಲಿ ವ್ಯತ್ಯಯ ಇಲ್ಲ