Publish Date: Mon, 23 Jan 2023 (17:35 IST)
Updated Date: Mon, 23 Jan 2023 (17:41 IST)
ಸಿದ್ದರಾಮಯ್ಯ ನವರಿಗೆ ಮೊದಲು ಅವರ ಕ್ಷೇತ್ರ ಹುಡುಕು ಅಂತಾ ಹೇಳಿ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಹೇಳಿದ್ದಾರೆ. ಜೆಡಿಎಸ್ ಗೆ ಯಾವುದೇ ತತ್ವ ಸಿದ್ಧಾಂತ ಇಲ್ಲ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ನಗರದಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ನವರಿಗೆ ಯಾವ ತತ್ವ ಸಿದ್ದಾಂತ ಇದೆ.ಶ್ರೀನಿವಾಸ್ ಗೌಡ, ವಾಸು ಕರೆದುಕೊಂಡು ಬಿಜೆಪಿ ಗೆ ಓಟು ಹಾಕಿಸಿದ್ರಲ್ಲಾ ಅದು ತತ್ವನಾ..? ಕುಪೇಂದ್ರ ರೆಡ್ಡಿಗೆ ಸೋಲಿಸಿದವರು ಯಾರು.? ೧೨ ಜನರನ್ನ ಬಾಂಬೆಗೆ ಕಳಿಸಿ ಯಡಿಯೂರಪ್ಪ ಸಿಎಂ ಮಾಡಿದವರು ಯಾರು. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನಿಲ್ಲಿ ನೋಡೊಣಾ, ಚಾಲೆಂಜ್ ತಗೆದುಕೊಳ್ಳಿ ಎಂದು ಸಿದ್ದರಾಮಯ್ಯಗೆ ಟಾಂಗ್ ನೀಡಿದ್ರು.