Select Your Language

Notifications

webdunia
webdunia
webdunia
webdunia

ಕನ್ನಡ ಕಾನೂನು ನಿಘನಂಟು ರಚಿಸುವಂತೆ ಕನ್ನಡ ಸಂಸ್ಕೃತಿ ಇಲಾಖೆಗೆ ಸಿಎಂ ಸೂಚನೆ

CM instructs Kannada culture department to create Kannada Law Dictionary
bangalore , ಸೋಮವಾರ, 23 ಜನವರಿ 2023 (18:07 IST)
ಕನ್ನಡದಲ್ಲಿ ತೀರ್ಪು ಕೊಡುವುದು ಸುಲಭವಲ್ಲ.ಕನ್ನಡದಲ್ಲಿ ತೀರ್ಪು ನೀಡಿ‌ ನೀವೆಲ್ಲ ಸಾಧನೆ ಮಾಡಿದ್ದೀರಾ.
ಅಧೀನ‌ ನ್ಯಾಯಾಲಯದಲ್ಲಿ ಇದೆ, ಉಚ್ಚ ನ್ಯಾಯಾಲಯದಲ್ಲೂ ಕೂಡ ಇದು ಬರಬೇಕು. ಕಷ್ಟ ಇದೆ ಆದ್ರೆ ಸಾಧ್ಯವಿದೆ. ಕನ್ನಡದ ಕಾನೂನು ನಿಘಂಟು  ರಚಿಸಬೇಕು ಎಂದು ಕನ್ನಡ ಸಂಸ್ಕೃತಿ ಇಲಾಖೆ ಕಾರ್ಯದರ್ಶಿಗೆ ಸಿಎಂ ಬಸವರಾಜ ಬೊಮ್ಮಯಿ ಸಲಹೆ ನೀಡಿದರು. ನ್ಯಾಯಾಂಗ ಕ್ಷೇತ್ರದಲ್ಲಿ 2019-2020, 2020-21ನೇ ಸಾಲಿನ ಕನ್ನಡ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿ, ತಜ್ಞರ ತಂಡದಿಂದ ಕನ್ನಡ ಕಾನೂನು ನಿಘಂಟು ರಚಿಸಬೇಕು. ಇದರಿಂದ ವಕೀಲರಿಗೆ, ನ್ಯಾಯಾಧೀಶರಿಗೆ ಅನೂಕುಲವಾಗಲಿದೆ. ಕನ್ನಡದಲ್ಲಿ‌ ತೀರ್ಪು ಕೊಡುವುದು ಜನರ ದೃಷ್ಟಿಯಿಂದ ಸಾಕಷ್ಟು ಒಳಿತು ಎಂದು ಹೇಳಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಮೇಲ್ಸೇತುವೆ ಬೇಡ ಎಂದು ಸಿಎಂ ಬೊಮ್ಮಾಯಿಗೆ ಪತ್ರ ಬರೆದ 2000ಕ್ಕೂ ಹೆಚ್ಚು ಮಕ್ಕಳು