Publish Date: Wed, 19 Oct 2022 (19:52 IST)
Updated Date: Wed, 19 Oct 2022 (19:56 IST)
ಹಾಸನಾಂಬೆ ದರ್ಶನಕ್ಕೆ ಪತಿ ಪತ್ನಿಯನ್ನು ಹೊತ್ತು ತಂದಿರುವ ಘಟನೆ ಹಾಸನ ಜಿಲ್ಲೆ ಹೊಳೆನರಸೀಪುರ ತಾಲ್ಲೂಕಿನ ಬೀಚೇನಹಳ್ಳಿಯಲ್ಲಿ ನಡೆದಿದೆ. ವಿಶೇಷ ಚೇತನ ಪತ್ನಿಯ ಆಸೆ ಈಡೇರಿಸಲು ಪತ್ನಿಯನ್ನು ಎತ್ತಿಕೊಂಡು ಬಂದು ದರ್ಶನ ಪಡೆದಿದ್ದಾರೆ. ನಾಗರಾಜ್ ಕಳೆದ ವರ್ಷ ಕೂಡ ಪತ್ನಿ ಗೆ ದೇವಿ ದರ್ಶನ ಮಾಡಿಸಿದ್ರು, ನಾಗರಾಜ್ ತಮ್ಮ ಪತ್ನಿ ಗೌರಮ್ಮರನ್ನ ಎತ್ತಿಕೊಂಡು ಬಂದು ದರ್ಶನ ಪಡೆದಿದ್ದಾರೆ. ಪೊಲೀಸರು ಪತ್ನಿ ಹೊತ್ತು ಬಂದ ನಾಗರಾಜ್ ಗೆ ವಿಶೇಷವಾಗಿ ದರ್ಶನ ಮಾಡಿಸಿದ್ದಾರೆ. ಪೊಲೀಸರು ನೇರವಾಗಿ ಗರ್ಭಗುಡಿ ಸಮೀಪ ಕರೆದೊಯ್ದು ಮಾನವೀಯತೆ ಮೆರೆದಿದ್ದಾರೆ. ಪೊಲೀಸರು ಭಾರೀ ಭಕ್ತರು ಸರತಿ ಸಾಲಿನಲ್ಲಿ ನಿಂತಿರೊ ನಡುವೆ ವಿಶೇಷ ಚೇತನೆಯ ದರ್ಶನಕ್ಕೆ ಆದ್ಯತೆ ನೀಡಿದ್ರು