Publish Date: Wed, 12 Feb 2020 (14:06 IST)
Updated Date: Wed, 12 Feb 2020 (14:08 IST)
ಭಾರತಕ್ಕೆ ಅಮೆರಿಕಾ ಅಧ್ಯಕ್ಷ ಭೇಟಿ ನೀಡುತ್ತಿರೋದ್ರಿಂದ ಜಗತ್ತಿಗೆ ಒಳ್ಳೆಯದಾಗುತ್ತದೆ.
ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತಕ್ಕೆ ಭೇಟಿ ನೀಡುತ್ತಿರೋದು ಸ್ಪೇಷಲ್ ವಿಷಯ. ಹೀಗಂತ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಟ್ರಂಪ್ ಭೇಟಿಯಿಂದಾಗಿ ಎರಡೂ ದೇಶಗಳ ನಡುವೆ ಸ್ನೇಹ ಬೆಳೆಯುತ್ತದೆ. ಬೆಳೆಯುತ್ತಿರೋ ಸ್ನೇಹ ಗಟ್ಟಿಯಾಗುತ್ತದೆ ಎಂದಿದ್ದಾರೆ.
ಫೆ. 24, 25 ರಂದು ಭಾರತಕ್ಕೆ ಟ್ರಂಪ್ ಭೇಟಿ ನೀಡಲಿದ್ದಾರೆ. ಅದ್ಧೂರಿ ಸ್ವಾಗತವನ್ನು ಕೋರಲಿದ್ದೇವೆ. ಇದು ವಿಶೇಷ ಭೇಟಿಯಾಗಿದೆ ಅಂತ ಮೋದಿ ಹೇಳಿಕೊಂಡಿದ್ದಾರೆ.
ಉಭಯ ದೇಶಗಳು ಪ್ರಜಾಪ್ರಭುತ್ವ ಹಾಗೂ ಬಹುತ್ವದ ಸಮಾನತೆಯ ವಿಷಯದಲ್ಲಿ ಹೆಚ್ಚು ಬದ್ಧತೆ ಹೊಂದಿವೆ. ಟ್ರಂಪ್ ಭೇಟಿಯಿಂದ ವಿಶ್ವಕ್ಕೆ ನೆರವಾಗುತ್ತದೆ ಅಂತ ಮೋದಿ ಬಣ್ಣಿಸಿದ್ದಾರೆ.