Publish Date: Sat, 08 Feb 2020 (21:16 IST)
Updated Date: Sat, 08 Feb 2020 (21:18 IST)
ಕನಕಪುರ ಬಂಡೆ ಖ್ಯಾತಿಯ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರು ಪ್ರಧಾನಿ ನರೇಂದ್ರ ಮೋದಿಗೆ ಟಾಂಗ್ ನೀಡಿದ್ದಾರೆ.
ಹೈವೋಲ್ಟೇಜ್ ಅಂತ ಅವರನ್ನು ಅವರೇ ಕರೆದುಕೊಳ್ತಿರೋ ನರೇಂದ್ರ ಮೋದಿ ದೇಶದ ಯುವಜನತೆಗೆ ಕೆಲಸ ಕೊಡಲಿ ಎಂದಿದ್ದಾರೆ. ಯುವಜನತೆಗೆ ಬಲ್ಪ ನೀಡಬೇಕು. ಉದ್ಯೋಗ ಕೊಡಲಿ ಅಂತ ಹೇಳಿದ್ದಾರೆ.
ರಾಹುಲ್ ಗಾಂಧಿ ಹೇಳಿಕೆಗೆ ಮೋದಿ ವ್ಯಂಗ್ಯವಾಡಿರೋದಕ್ಕೆ ಪ್ರತಿಕ್ರಿಯಿಸಿರೋ ಡಿ.ಕೆ.ಶಿವಕುಮಾರ್, ಜಗತ್ತಿನ ದೇಶಗಳು ಹೊಗಳುವಂತೆ ದೇಶದ ಆರ್ಥಿಕ ಸ್ಥಿತಿಯನ್ನು ಸುಧಾರಿಸೋ ಕೆಲಸವನ್ನು ಮೋದಿ ಮೊದಲು ಮಾಡಲಿ ಅಂತ ಒತ್ತಾಯ ಮಾಡಿದ್ದಾರೆ.