Publish Date: Fri, 09 Feb 2024 (18:00 IST)
Updated Date: Fri, 09 Feb 2024 (18:06 IST)
ಬೆಂಗಳೂರು : ಆಟೋಚಾಲಕನಾಗಿ ಕೆಲಸ ಮಾಡುತ್ತಿದ್ದ ಸುದೀಪ್ ಗೆ ಮಲ್ಲಮ್ಮ ಎಂಬ ಯುವತಿಯೊಡನೆ ಮದುವೆ ನಿಶ್ಚಯವಾಗಿತ್ತು. ಆಕೆಯೊಡನೆ ಆಟೋದಲ್ಲಿ ಸುತ್ತಾಡುತ್ತಿದ್ದ. ಇದನ್ನು ನೋಡಿದ್ದ ವಿವೇಕ್ ರಾವ್ ಆಕೆಯನ್ನು ಮಲ್ಲವ್ವ ನಿಮ್ಮವ್ವ ಎಲ್ಲವ್ವ ಎಂದು ರೇಗಿಸಿದ್ದ. ಗೆಳತಿಯ ವಿಷಯದಲ್ಲಿ ಕುಹಕ ಮಾಡಿದ್ದ ಸ್ನೇಹಿತನಿಗೆ ಚಾಕುವಿನಿಂದ ಇರಿದಿರುವ ಘಟನೆ ಮಾಗಡಿ ರಸ್ತೆಯಲ್ಲಿ ನಡೆದಿದೆ. ವಿವೇಕ್ ರಾವ್ ಎಂಬಾತ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದು, ಆರೋಪಿ ಸುದೀಪ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕುಪಿತಗೊಂಡಿದ್ದ ಸುದೀಪ್ ವಿವೇಕ್ ರಾವ್ ಗೆ ವಾರ್ನಿಂಗ್ ನೀಡಲು ಬಂದಿದ್ದ. ಈ ವೇಳೆ ಮಾತಿಗೆ ಮಾತು ಬೆಳೆದು ಸುದೀಪ್ ವಿವೇಕ್ ಹೊಟ್ಟೆಗೆ ಚಾಕುವಿನಿಂದ ಇರಿದಿದ್ದ. ಮಾಗಡಿ ರಸ್ತೆ ಠಾಣೆಯ ಪೊಲೀಸರು ಸುದೀಪ ನನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.