Publish Date: Fri, 10 May 2019 (16:47 IST)
Updated Date: Fri, 10 May 2019 (16:49 IST)
ಪ್ರಖ್ಯಾತ ಜವಳಿ ಉದ್ಯಮಿ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದ್ದು, ಘಟನೆಗೆ ವ್ಯಾಪಕ ಖಂಡನೆ, ಪ್ರತಿಭಟನೆಗಳು ವ್ಯಕ್ತವಾಗುತ್ತಿವೆ.
ಜಯಪುರ ಜಿಲ್ಲೆಯ ಚಡಚಣದಲ್ಲಿ ಈ ಘಟನೆ ನಡೆದಿದೆ. ಖ್ಯಾತ ಜವಳಿ ವ್ಯಾಪಾರಿ ಅಜಿತ್ ಮುತ್ತಿನ ಮೇಲೆ ಹಲ್ಲೆ ನಡೆದಿದೆ. ಈ ಘಟನೆ ಖಂಡಿಸಿ ಪ್ರತಿಭಟನೆ ನಡೆಸಲಾಗಿದೆ.
ಚಡಚಣ ಪಟ್ಟಣದ ಬಸವೇಶ್ವರ ಸರ್ಕಲ್ ನಲ್ಲಿ ವಿವಿಧ ಸಂಘಟನೆಗಳು ಹಾಗೂ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ.
ಮಾರಣಾಂತಿಕ ಹಲ್ಲೆ ನಡೆಸಿದ ದುಷ್ಕರ್ಮಿಗಳನ್ನು ಶಿಘ್ರದಲ್ಲೇ ಬಂಧಿಸಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆದಿದೆ.
ತಡ ರಾತ್ರಿ ಅಪರಿಚಿತ ಯುವಕರ ಗ್ಯಾಂಗ್ ನಿಂದ ಹಲ್ಲೆಗೊಳಗಾಗಿದ್ದಾರೆ ವ್ಯಾಪಾರಿ ಅಜಿತ್ ಮುತ್ತಿನ.