Publish Date: Sat, 01 Apr 2023 (14:38 IST)
Updated Date: Sat, 01 Apr 2023 (13:21 IST)
ಶಾರ್ಟ್ ಸರ್ಕ್ಯೂಟ್ ನಿಂದ ಧಗಧಗನೆ ಗೋದಾಮು ಹೊತ್ತಿಉರಿದಿದೆ.ವಿದ್ಯುತ್ ಕಂಬದಿಂದ ವಿದ್ಯುತ್ ತಂತಿ ಕಡಿದು ಬಿದ್ದು ಅವಘಡ ಸಂಭವಿಸಿರುವ ಘಟನೆ ನೆಲಮಂಗಲದ ಟಿ.ಬೇಗೂರು ಗ್ರಾಮದಲ್ಲಿ ನಡೆದಿದೆ.ಮಾಲೀಕ ಬಾಲಕೃಷ್ಣ ಎಂಬುವರಿಗೆ ಸೇರಿದ ಗೋದಾಮಾಗಿದ್ದು,ಗೋದಾಮು ಬಾಡಿಗೆ ಪಡೆದಿದ್ದ ರೆಸ್ಟೋಲೆಕ್ಸ್ ಮ್ಯಾಟ್ರಸೀಸ್ ಕಂಪನಿ,ಗೋದಾಮಿನಲ್ಲಿದ್ದ ದುಬಾರಿ ಮೌಲ್ಯದ ಮಿಷನರಿ, ಮ್ಯಾಟ್ರಸೀಸ್ ಸಲಕರಣೆಗಳು ಹಾನಿಯಾಗಿದೆ.ಅಂದಾಜು ಸುಮಾರು 5 ಕೋಟಿಗೂ ಹೆಚ್ಚು ಮೌಲ್ಯದ
ಮಿಷನರಿ, ಸಾಮಗ್ರಿಗಳು ಬೆಂಕಿಗೆ ಆಹುತಿಯಾಗಿದೆ.ನೆಲಮಂಗಲ ಅಗ್ನಿಶಾಮಕ ಸಿಬ್ಬಂದಿಗಳಿಂದ ಬೆಂಕಿ ನಂದಿಸೋ ಕಾರ್ಯ ಮಾಡಿದ್ದು,ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
geetha
Publish Date: Sat, 01 Apr 2023 (14:38 IST)
Updated Date: Sat, 01 Apr 2023 (13:21 IST)