Select Your Language

Notifications

webdunia
webdunia
webdunia
webdunia

ದಾಖಲೆವಿಲ್ಲದೆ ಸಾಗಿಸುತ್ತಿದ್ದ 18 ಕೆ.ಜಿ.ಬೆಳ್ಳಿ ಆಭರಣ ವಶ

18 kg of silver jewelery being carried without documents seized
bangalore , ಶನಿವಾರ, 1 ಏಪ್ರಿಲ್ 2023 (13:20 IST)
ನೀತಿ ಸಂಹಿತೆ‌ ನಡುವೆಯೂ ದಾಖಲೆಗಳಿಲ್ಲದೆ ಸಾಗಿಸುತ್ತಿದ್ದ 18 ಕೆ.ಜಿ. ಬೆಳ್ಳಿ ವಸ್ತುಗಳನ್ನು ಹಲಸೂರು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಸರ, ಉಂಗುರ, ಕೈ ಖಡ್ಗ ಸೇರಿದಂತೆ ವಿವಿಧ‌ ಮಾದರಿ ಬೆಳ್ಳಿ ವಸ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಚುನ್ನಿಲಾಲ್ ಹಾಗೂ ಇಂದ್ರಕುಮಾರ್ ಎಂಬುವರು ಇಂದು ಬೆಳಗ್ಗೆ ಹಲಸೂರಿನ‌ ಆರ್ಟಿಲರಿ ರೋಡ್ ನಲ್ಲಿ ಬೆಳ್ಳಿ ಸಾಮಾನು ಸಾಗಿಸುವಾಗ ನಾಕಾಬಂದಿ ಹಾಕಿದ್ದ ಪೊಲೀಸರು ವಾಹನ‌ ತಡೆಗಟ್ಟಿದ್ದಾರೆ. ತಪಾಸಣೆ ನಡೆಸಿದಾಗ ಬೆಳ್ಳಿ ಸಾಮಾನು ಪತ್ತೆಯಾಗಿದೆ.‌‌ ಕೂಡಲೇ ಇಬ್ಬರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದಾಗ ಜ್ಯೂವೆಲ್ಲರಿ ಶಾಪ್ ವೊಂದಕ್ಕೆ ತೆಗದುಕೊಂಡು ಹೋಗುತ್ತಿರುವ ಹೇಳಿದ್ದಾರೆ. ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಗಂಭೀರ‌ ಸ್ವರೂಪವಲ್ಲದ‌‌ ಅಪರಾಧ ಪ್ರಕರಣವಾಗಿರುವುದರಿಂದ ಠಾಣಾ ಜಾಮೀನಿನ‌ ಮೇರೆಗೆ ಇಬ್ಬರು ವ್ಯಕ್ತಿಗಳನ್ನು ಬಿಡುಗಡೆ ಮಾಡಲಾಗಿದೆ. ವಶಕ್ಕೆ ಪಡೆದುಕೊಂಡಿರುವ ಬೆಳ್ಳಿ ಸಾಮಾನುಗಳನ್ನು ಮರಳಿ ಪಡೆಯಲು ಕೋರ್ಟ್ ನಲ್ಲಿ ದಾಖಲಾತಿ ಒದಗಿಸಬೇಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪಾರ್ಕಿಂಗ್ ವಿಚಾರಕ್ಕೆ ಜಗಳ ಯುವಕನ ಹತ್ಯೆ..!