Select Your Language

Notifications

webdunia
webdunia
webdunia
webdunia

ನಮ್ಮ ಹೋರಾಟ ಫಲಿಸಿದೆ : ಜಯ ಬಸವ ಮೃತ್ಯುಂಜಯ ಸ್ವಾಮೀಜಿ

Former CM Yeddyurappa ready for state tour
bangalore , ಗುರುವಾರ, 30 ಮಾರ್ಚ್ 2023 (21:30 IST)
ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಷಾ ಮಧ್ಯಪ್ರವೇಶ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಬೊಮ್ಮಾಯಿ‌ ದಿಟ್ಟ ನಿರ್ಧಾರದಿಂದ ಪಂಚಮಸಾಲಿ ಸಮುದಾಯದ ಹೋರಾಟ ಫಲಿಸಿದೆ. ಗ್ರಾಮಗಳಲ್ಲಿ ವಿಜಯೋತ್ಸವ ಆಚರಿಸುತ್ತೇವೆ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಪೀಠಾಧಪತಿ ಶ್ರೀ ಜಯ ಬಸವ ಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.ಸಿಎಂ ಬಸವರಾಜ ಬೊಮ್ಮಾಯಿ‌ ಅವರಿಂದ ವೀರಶೈವ-ಲಿಂಗಾಯತ ಸಮುದಾಯವನ್ನು 2ಡಿಗೆ ಸೇರಿಸಿ ಶೇಕಡ 7ರಷ್ಟು ಮೀಸಲಾತಿ ಕಲ್ಪಿಸಿದ ಅಧಿಕೃತ ಆದೇಶದ ಪ್ರತಿ ಪಡೆದು, ಸಿಎಂ ಬೊಮ್ಮಾಯಿ‌ಗೆ ಸನ್ಮಾನಿಸಿ ಗೌರವಿಸಿದ ನಂತರ ಮಾತನಾಡಿದ ಅವರು,2ಎ ದಲ್ಲಿರುವ ಸಮುದಾಯಗಳಿಗೆ ಅನ್ಯಾಯವಾಗುತ್ತದೆ ಎಂದು ಪ್ರತ್ಯೇಕವಾಗಿ 2ಡಿ ಸೃಷ್ಟಿಸಿರುವುದು, ಈ ವರ್ಗದಲ್ಲಿ ವಿವಿಧ ಸಮುದಾಯಗಳ ಸೇರ್ಪಡೆ ಸಮಂಜಸವಾಗಿದೆ. ಚುನಾವಣೆ ಮುಗಿದ ನಂತರ ಕೇಂದ್ರದ ಒಬಿಸಿ ಪಟ್ಟಿಗೆ ಸೇರಿಸಲು ಒತ್ತಾಯಿಸಿ ಎರಡನೇ ಹಂತದ ಹೋರಾಟ ನಡೆಸಲಿದ್ದೇವೆ ಎಂದು ತಿಳಿಸಿದ್ದಾರೆ

Share this Story:

Follow Webdunia kannada

ಮುಂದಿನ ಸುದ್ದಿ

ಅದ್ದೂರಿಯಾಗಿ ತಯಾರಾಗ್ತಿದೆ ವಿಶ್ವವಿಖ್ಯಾತಿ ಬೆಂಗಳೂರು ಕರಗ