Select Your Language

Notifications

webdunia
webdunia
webdunia
webdunia

ಅದ್ದೂರಿಯಾಗಿ ತಯಾರಾಗ್ತಿದೆ ವಿಶ್ವವಿಖ್ಯಾತಿ ಬೆಂಗಳೂರು ಕರಗ

ಅದ್ದೂರಿಯಾಗಿ ತಯಾರಾಗ್ತಿದೆ ವಿಶ್ವವಿಖ್ಯಾತಿ ಬೆಂಗಳೂರು ಕರಗ
bangalore , ಗುರುವಾರ, 30 ಮಾರ್ಚ್ 2023 (21:15 IST)
ಕೊರೋನಾದಿಂದ ಕಳೆಗುಂದಿದ್ದ ಕರಗ ಈ ಬಾರಿ ಮತ್ತೆ ತನ್ನ ಗತ ವೈಭವಕ್ಕೆ ಮರಳಲಿದೆ. ಕೋರೋನಾ ಅಲೆ ಕಡಿಮೆಯಾದ ಹಿನ್ನಲೆ ದ್ರೌಪದಿ ದೇವಿಯ ಆರಾಧನೆಗೆ ಭರದ ಸಿದ್ಧತೆಯೂ ಆರಂಭವಾಗಿದ್ದು ಬೆಂಗಳೂರು ಕರಗ ಅದ್ದೂರಿಯಾಗಿ ತಯಾರಾಗ್ತಿದೆ.
 
ಕೊರೋನಾ ಕಾಲಿಟ್ಟ ಮೇಲೆ ಎಲ್ಲವನ್ನೂ ತಲೆಕೆಳಗಾಗಿಸಿದೆ. ತಲೆತಲಾಂತರಗಳಿಂದ ನಡೆದುಕೊಂಡು ಬಂದಿದ್ದ ಅದೆಷ್ಟೋ ಸಂಪ್ರದಾಯಕ್ಕೂ ಕೊರೋನಾ ಎಳ್ಳು ನೀರು ಬಿಟ್ಟಿದೆ. ಇದ್ರಲ್ಲಿ ಬೆಂಗಳೂರಿನ ವಿಶ್ವ ಪ್ರಸಿದ್ಧ ಕರಗ ಮಹೋತ್ಸವವೂ ಒಂದು,, ಪ್ರವಾಹ, ಬರ, ಯುದ್ಧ, ಏನೇ ಆದ್ರೂ ನಿಲ್ಲದೇ ನಡೆದುಕೊಂಡು ಬಂದಿದ್ದ ಕರಗ ಶಕ್ತ್ಯೋತ್ಸವ ಎರಡು ವರ್ಷ ನಿಂತು ಹೋಗಿತ್ತು. ಅದ್ರೆ ಕಳೆದ ವರ್ಷ ಕೊಂಚ ಮಟ್ಟಿಗೆ ಬ್ರೇಕ್ ನೀಡಿದ ವೈರಸ್ ನಿಂದ ಮತ್ತೆ ಮುನ್ನೇಲ್ಲೆಗೆ ಕರಗ ಉತ್ಸವ ವಿಜ್ರುಭಂರಣೆಯಿಂದ ಶುರುವಾಯ್ತು, ಇನ್ನೂ ಈ ಬಾರಿ ದ್ರೌಪದಿ ದೇವಿಯ ಕರಗ ಮಹೋತ್ಸವಕ್ಕೆ ಭರ್ಜರಿ ಸಿದ್ದತೆ ನಡೆಯುತ್ತಿದ್ದು, ಈ ಬಾರಿ ಮತ್ತೆ ಕರಗ ತನ್ನ ಹಿಂದಿನ ಗತವೈಭವಕ್ಕೆ ಮರಳುತ್ತಿದೆ.
 
ಬೆಂಗಳೂರು ಹಬ್ಬವೆಂದೆ ಪರಿಗಣಿಸೋ ಬೆಂಗಳೂರು ಕರಗಕ್ಕೆ ಮೂಹೂರ್ತ  ಪಿಕ್ಸ್ ಹಾಗಿದ್ದು, ಈಗಾಗ್ಲೇ ಕರಗ ಶಕ್ತ್ಯೋತ್ಸವ ನಗರದಲ್ಲಿ ಆರಂಭವಾಗಿದೆ,ಏಪ್ರಿಲ್ 6 ಚೈತ್ರ ಮಾಸದ ಪೂರ್ಣಿಮೆಯಾಂದು ದ್ರೌಪದಿ ದೇವಿಯ ಹೂವಿನ ಕಗರ ಶಕ್ತ್ಯೋತ್ಸವ ಜರುಗಲಿದೆ ಎಂದು ಕರಗ ಉತ್ಸವ ಸಮಿತಿಯ ಅಧ್ಯಕ್ಷ ಸತ್ತೀಶ್ ಹೇಳಿದ್ದಾರೆ ಬಿಬಿಎಂಪಿ ಹಾಗೂ ಸರ್ಕಾರದಿಂದ ಕರಗ ಉತ್ಸವಕ್ಕೆ ಎಲ್ಲಾ ರೀತಿಯ ಸೌಲಭ್ಯ ನೀಡಲಾಗ್ತಿದೆ, ಕರಗ ಉತ್ಸವ ಪ್ರತಿಬಾರಿಯಂತೆ ಈ ಬಾರಿಯು ಪಕ್ಷಾತೀತವಾಗಿ ನಡೆಯಲಿದೆ, ಮಸ್ತಾನ್ ಸಾಭ್ ದರ್ಗಕ್ಕೆ ಕರಗ ಹೋಗೆ ಹೋಗುತ್ತೆ, ಮೊದಲಿನಿಂದಲು ಇರುವ ಸಂಪ್ರದಾಯದಂತೆ ಕರಗ ನಡೆಯಲಿದೆ ಯಾವುದೇ ಸಂಪ್ರದಾಯಗಳನ್ನು ಕಡಿತಗೊಳಿಸಲಾಗುವುದಿಲ್ಲ ಶಾಂತಿ ಸೌಹಾರ್ದದಿಂದ ಕರಗ ಉತ್ಸವ ನಡೆಯಲಿದೆ, ಯಾವುದೇ ವ್ಯತ್ಯಾಸ ಇಲ್ಲ ಯಾರಾದ್ರು ಈ ವಿಚಾರದಲ್ಲಿ ಧಾರ್ಮಿಕ ಭಾವನೆ ಹದಗೆಡಿಸಿದ್ರೆ ಕಾನೂನು ಕ್ರಮ ಕೈಗೋಳ್ತರೆ ಇನ್ನೂ ನೀತಿ ಸಂಹಿತೆ ಜಾರಿ ಆಗಿದ್ರು ವಿಶ್ವ ವಿಖ್ಯಾತಿ ಕರಗ ವಿಜೃಂಭಣೆ ಇಂದ ನೆರವೇರುತ್ತೆ ಎಂದಿದ್ದಾರೆ.
 
ಇನ್ನೂ ಜಾತ್ರೆ ಮಹೋತ್ಸವ ಈ ಬಾರಿ ಮತ್ತೆ ವಿಜೃಂಭರಣೆಯಿಂದ ಅಚರಿಸಲು ಕರಗ ಉತ್ಸವ ಸಮಿತಿ ಕೂಡ ಸಿದ್ದತೆ ನಡೆಸಿದೆ, ಸುಮಾರು 800 ವರ್ಷಗಳ ಇತಿಹಾಸ ಇರೋ ಕರಗ ಉತ್ಸವ ನಾಡಪ್ರಭು ಕೆಂಪೇಗೌರ ಕಾಲದಿಂದಲು ಅಚರಣೆ ಮಾಡಿಕೊಂಡು ಬಂದಿದ್ರು, ಇನ್ನೂ ಈ ಬಾರಿ ಜ್ನಾನೇಂದ್ರ ರವರು 12 ಬಾರಿ ಕರಗ ಹೊರುವರು, ರಾಜ್ಯ ಸೇರಿದಂತೆ ವಿದೇಶದಿಂದಲು ಈ ಉತ್ಸವ ನೋಡಲು ಲಕ್ಷಂತರ ಭಕ್ತದಿಗಳು ಬರ್ತರೆ ,ಕರಗ ಉತ್ಸವದ ಮೊದಲ ದಿನ ಧ್ವಜಾರೋಹಣ ಮಾಡಿ ಉತ್ಸವಕ್ಕೆ ಚಾಲನೆ ನೀಡ್ತಿವಿ, ನಾಳೆಯಿಂದ 9 ದಿನಗಳವರೆಗೆ ಪ್ರತಿನಿತ್ಯ ಅಮ್ಮನಿಗೆ ವಿವಿಧ ಬಗ್ಗೆಯ ಪೂಜೆ ಮಾಡ್ತಿವಿ,ಏಪ್ರೀಲ್ 6 ರ ರಾತ್ರಿ 12 ಗಂಟೆಗೆ ಬೆಂಗಳೂರು ಕರಗ ನಡೆಯಲ್ಲಿದೆ, ಇನ್ನೂ ಈ ಯತ್ಸವಕ್ಕೆ ರಾಜ್ಯದ ಗಣ್ಯರು ಸೇರಿದಂತೆ ಮಠಧೀಶಾರು ಅಗಮಿಸ್ತರೆ, ಈ ಬಾರಿ ದ್ರೌಪದಿಯಮ್ಮನ್ನ ಕರಗ ಉತ್ಸವ ನೋಡಲು ಜನ ಕಾತುರದಿಂದ ಕಾಯುತ್ತಿದ್ದಾರೆ.
 
ಐತಿಹಾಸಿಕ ಕರಗ ಉತ್ಸವಕ್ಕೆ ಚಾಲನೆ ಸಿಕ್ಕಿದ್ದು ಕರಗ ಶಕ್ತ್ಯೋತ್ಸವ ಈಬಾರಿ ಅದ್ದೂರಿಯಾಗಿ ನಡೆಯಲಿದೆ.  ಹೀಗಾಗಿ ವಹ್ನೀ ಕುಲ ಕ್ಷತ್ರೀಯರ ಮನೆಗಳಲ್ಲಿ ಸಂತಸ ಮನೆಮಾಡಿದೆ. ನಗರದ ಧರ್ಮರಾಯ ಸ್ವಾಮಿ ದೇವಾಲಯ ಆವರಣವೂ ಕೂಡ ಕರಗ ಶಕ್ತ್ಯೋತ್ಸವಕ್ಕೆ ಸಿದ್ಧಗೊಳ್ತಿದೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಸಿದ್ದರಾಮಯ್ಯ v/sಬಿಜೆಪಿ ಟ್ವೀಟ್ ವಾರ್