ವರುಣಾದಿಂದ BJP ರಾಜ್ಯ ಉಪಾಧ್ಯಕ್ಷ B.Y ವಿಜಯೇಂದ್ರ ಕಣಕ್ಕಿಳಿಯುತ್ತಾರೆ ಎಂಬ ವಿಚಾರಕ್ಕೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಪ್ರತಿಕ್ರಿಯಿಸಿದ್ದಾರೆ. ಬಾಗಲಕೋಟೆಯಲ್ಲಿ ಮಾತನಾಡಿದ ಅವರು, ಪಕ್ಷದಲ್ಲಿ ಆ ವಿಚಾರವಾಗಿ ಚರ್ಚೆ ಮಾಡ್ತಾರೆ. ನನ್ನ ಗಮನಕ್ಕೆ ಯಾವುದು ಬಂದಿಲ್ಲ.. ಪಕ್ಷದ ವೇದಿಕೆಯಲ್ಲಿ ಏನು ಚರ್ಚೆ ಆಗುತ್ತೆ ನೋಡೋಣ ಎಂದು ಹೇಳಿದ್ರು. ಆಪರೇಷನ್ ಕಮಲಕ್ಕೆ ಬಲಿಯಾದವರನ್ನ ಕಾಂಗ್ರೆಸ್ ಎಂದಿಗೂ ವಾಪಾಸ್ ಪಕ್ಷಕ್ಕೆ ಸೇರಿಸಿಕೊಳ್ಳಲ್ಲ ಅಂತ ಹೇಳುತ್ತಿದ್ದವರು
ಈಗ ಮತ್ತೆ ಯಾಕೆ ಫೋನ್ ಮಾಡಿ ಕರೆಯುತ್ತಿದ್ದಾರೆಂದು ಶೆಟ್ಟರ್ ಪ್ರಶ್ನಿಸಿದ್ರು. ಕಾಂಗ್ರೆಸ್ ಮುಗಿದು ಹೋದ ಅಧ್ಯಾಯ. ಇತ್ತೀಚಿನ ಚುನಾವಣೆಗಳನ್ನ ಗಮನಿಸಿದ್ರೆ, ಮೇಘಾಲಯ, ಛತ್ತಿಸ್ಗಡ್, ನಾಗಾಲ್ಯಾಂಡ್ನಲ್ಲಿನ ಫಲಿತಾಂಶದಲ್ಲಿ ಕಾಂಗ್ರೆಸ್ ಧೂಳಿಪಟವಾಗಿದೆ.. ಈ ಮೂಲಕ ಕಾಂಗ್ರೆಸ್ನ ಅವಸಾನ ಪ್ರಾರಂಭವಾಗಿದೆ ಎಂದು ಜಗದೀಶ್ ಶೆಟ್ಟರ್ ವ್ಯಂಗ್ಯವಾಡಿದ್ರು. BJP ಒಳ ಒಪ್ಪಂದ ಮಾಡಿಕೊಂಡಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಕಾಂಗ್ರೆಸ್ನವರಿಗೆ ಭಯ ಶುರುವಾಗಿದೆ.. ಕಾರ್ನಾಟಕದಲ್ಲಿ ಒಳ ಒಪ್ಪಂದ ಮಾಡಿಕೊಳ್ಳಲ್ಲ. ರಾಜ್ಯದಲ್ಲಿ ಬಿಜೆಪಿ ಸ್ವಂತ ಸಂಖ್ಯೆಯಲ್ಲಿ ಅಧಿಕಾರಕ್ಕೆ ಬರುತ್ತೆ. ಸೋಲಿನ ಭೀತಿಯಿಂದ ಸಿದ್ದರಾಮಯ್ಯ ಹಾಗೆ ಹೇಳಿದ್ದಾರೆ ಎಂದು ತಿವಿದ್ರು.