Select Your Language

Notifications

webdunia
webdunia
webdunia
webdunia

ಯುವತಿಯನ್ನ ಹುರಿದು ಮುಕ್ಕಿದ ಕಾಮುಕರು

Lovers who roasted young women
bangalore , ಶನಿವಾರ, 1 ಏಪ್ರಿಲ್ 2023 (12:45 IST)
ಸಿಲಿಕಾನ್ ಸಿಟಿ ಮಹಿಳೆಯರಿಗೆ ಸೇಫ್ ಅಲ್ಲ ಅನ್ನೋದು ಮತ್ತೊಮ್ಮೆ ಸಾಬೀತಾಗಿದೆ.ಪಾರ್ಕ್ ನಲ್ಲಿ ಕುಳಿತಿದ್ದ ಯುವತಿಯನ್ನ ಎಳೆದೊಯ್ದ ಕಾಮುಕರು ಹುರಿದು ಮುಕ್ಕಿದ್ದಾರೆ.ರಾತ್ರಿ ಇಡೀ ಕಾರ್ ನಲ್ಲೆ ಸುತ್ತಾಡಿಸಿ ಅತ್ಯಾಚಾರ ಎಸಗಿದ್ದಾರೆ.ನಾಲ್ವರು ಸೇರಿ ನಡೆಸಿದ ಸಾಮೂಹಿಕ ಅತ್ಯಾಚಾರಕ್ಕೆ ಸಂತ್ರಸ್ಥೆ ನಲುಗಿ ಹೋಗಿದ್ದಾಳೆ.ಮಾರ್ಚ್ 25 ರ ರಾತ್ರಿ. 9.30 ರ ಸಮಯ.ಬೆಂಗಳೂರಿನ ಹೃದಯ ಭಾಗದಂತಿರುವ ಕೋರಮಂಗಲದ ನ್ಯಾಷನಲ್ ಗೇಮ್ಸ್ ವಿಲೇಜ್..ಇದೇ ಏರಿಯಾದ ಪಾರ್ಕ್ ನಲ್ಲಿ ಕುಳಿತಿದ್ದ‌‌..ಯುವತಿ ನರಕಯಾತನೆ ಅನುಭವಿಸಿದ್ದಾಳೆ.ನಾಲ್ವರು ಕಾಮುಕರು ಮೃಗದಂತೆ ಎರಗಿದ್ದಾರೆ ರಾತ್ರಿ‌ ಇಡೀ ಅತ್ಯಾಚಾರ ಎಸಗಿ ನಡು ರಸ್ತೆಯಲ್ಲೇ ಬಿಸಾಡಿ ಹೋಗಿದ್ದಾರೆ.

ಕಾರ್..ಕೆಎ 01 ಎಂಬಿ 6169 ನಂಬರ್ ನ ಇದೇ ಮಾರುತಿ ಸುಜುಕಿ 800 ಕಾರು,ಘಟನೆಯ ಭೀಕರತೆ ಹೇಳ್ತಿದೆ.ಹರಿದಿರುವ ಕಾರಿನ ಸೀಟ್ ಗಳು ಅತ್ಯಾಚಾರದ ಭಯಾನಕತೆ ಬಿಚ್ಚಿಡ್ತಿದೆ..ಮಾರ್ಚ್ 25 ರ ರಾತ್ರಿ 9.30 ಕ್ಕೆ ಯುವತಿಯೊಬ್ಬಳು ನ್ಯಾಷನಲ್ ಗೇಮ್ಸ್ ವಿಲೇಜ್ ನ  ಪಾರ್ಕ್ ನಲ್ಲಿ ಸ್ಬೇಹಿತನ ಜೊತೆಗೆ ಕುಳಿತಿದ್ಳು.ಅಲ್ಲಿಗೆ ಆಗಮಿಸಿದ್ದ ಸತೀಶ್,ವಿಜಯ್,ಶ್ರೀಧರ್,ಕಿರಣ್ ಎಂಬ ಕಾಮುಕರು ಹೆದರಿಸಿ ಯುವತಿ ಜೊತೆಗಿದ್ದ ಸ್ನೇಹಿತನನ್ನ ಕಳುಹಿಸಿದ್ದಾರೆ.

ನಂತರ ಯುವತಿ ಜೊತೆಗೆ ಜಗಳ ತೆಗೆದಿದ್ದಾರೆ.ತಾವು ತಂದಿದ್ದ 800 ಕಾರಿನಲ್ಲೇ ಕಿಡ್ನಾಪ್ ಮಾಡಿದ್ದಾರೆ..ಕಾರಿನಲ್ಲಿ ದೊಮ್ಮಲೂರು.ಇಂದಿರಾನಗರ..ಹೊಸೂರು ರಸ್ತೆ..ಅತ್ತಿಬೆಲೆ..ಆನೇಕಲ್..ಸೇರಿ ನೈಸ್ ರಸ್ತೆಯಲ್ಲೆಲ್ಲ ಸುತ್ತಾಡಿಸಿದ್ದಾರೆ..ಚಲಿಸುತ್ತಿದ್ದ ಕಾರಿನಲ್ಲಿಯೇ ನಾಲ್ವರು ಸೇರಿ ಯುವತಿ ಮೇಲೆ ಅತ್ಯಾಚಾರ ಎಸಗಿದ್ದಾರೆ.ಕಾರಿನಲ್ಲಿಯೇ ನರಕ ತೋರಿಸಿದ್ದಾರೆ.ರಾತ್ರಿ 9.30 ಗಂಟೆಗೆ ಕಿಡ್ನಾಪ್ ಮಾಡಿಕೊಂಡು ಹೋದ ಆರೋಪಿಗಳು 26 ರ ಬೆಳಗಿನ ಜಾವ 3.30 ಗಂಟೆಗೆ ಯುವತಿ ಮನೆ ರಸ್ತೆಯಲ್ಲಿ ಎಸೆದು ಪರಾರಿಯಾಗಿದ್ದಾರೆ.ನಂತರ ಚಿಕಿತ್ಸೆ ಪಡೆದು ಚೇತರಿಸಿಕೊಂಡ ಯುವತಿ ಕೋರಮಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.ತಕ್ಷಣ ಫೀಲ್ಡಿಗಿಳಿದ ಕೋರಮಂಗಲ ಪೊಲೀಸರು ನಾಲ್ವರು ಆರೋಪಿಗಳನ್ನ ಬಂಧಿಸಿ ಜೈಲಿಗಟ್ಟಿದ್ದಾರೆ.ಅದೇನೆ ಹೇಳಿ ಪದೇ ಪದೇ ಸಿಲಿಕಾನ್ ಸಿಟಿಯಲ್ಲಿ ನಡೆಯುತ್ತಿರುವ ಇಂತಹ ಪೈಶಾಚಿಕ ಕೃತ್ಯ ಜನ ಬೆಚ್ಚಿಬೀಳುವಂತೆ ಮಾಡ್ತಿದೆ.ಸಿಟಿ ಪೊಲೀಸರು ಕಠಿಣ ಕ್ರಮ ಜರುಗಿಸಿ ಇಂತಹ ಕೃತ್ಯಕ್ಕೆ ಬ್ರೇಕ್ ಹಾಕಬೇಕಿದೆ
 

Share this Story:

Follow Webdunia kannada

ಮುಂದಿನ ಸುದ್ದಿ

ಎಕ್ಸ್‌ಪ್ರೆಸ್‌ವೇ ಸಂಚಾರ ಮತ್ತಷ್ಟು ದುಬಾರಿ! ಟೋಲ್ ದರ ಹೆಚ್ಚಳ