Select Your Language

Notifications

webdunia
webdunia
webdunia
webdunia

ಎಕ್ಸ್‌ಪ್ರೆಸ್‌ವೇ ಸಂಚಾರ ಮತ್ತಷ್ಟು ದುಬಾರಿ! ಟೋಲ್ ದರ ಹೆಚ್ಚಳ

ಎಕ್ಸ್‌ಪ್ರೆಸ್‌ವೇ ಸಂಚಾರ ಮತ್ತಷ್ಟು ದುಬಾರಿ! ಟೋಲ್ ದರ ಹೆಚ್ಚಳ
ರಾಮನಗರ , ಶನಿವಾರ, 1 ಏಪ್ರಿಲ್ 2023 (11:22 IST)
ರಾಮನಗರ : ಲೋಕಾರ್ಪಣೆಗೊಂಡ ದಿನದಿಂದಲೂ ಸಾಕಷ್ಟು ವಿವಾದಗಳಿಂದಲೇ ಸದ್ದು ಮಾಡುತ್ತಿರುವ ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಟೋಲ್ ದರ ಮತ್ತೆ ಏರಿಕೆಗೊಂಡಿದೆ. ಶನಿವಾರದಿಂದ ಪರಿಷ್ಕೃತ ದರ ಅನ್ವಯವಾಗಲಿದ್ದು ದಶಪಥ ಹೆದ್ದಾರಿ ಸಂಚಾರ ಮತ್ತಷ್ಟು ದುಬಾರಿ ಆಗಲಿದೆ.
 
ಕೇಂದ್ರ ಹೆದ್ದಾರಿ ಪ್ರಾಧಿಕಾರದ ಸೂಚನೆಯಂತೆ ರಾಷ್ಟ್ರೀಯ ಹೆದ್ದಾರಿ ಶುಲ್ಕ ನಿಯಮ 2008ರ ಪ್ರಕಾರ, ಹಳೆಯ ದರಕ್ಕಿಂತ ಶೇ.22ರಷ್ಟು ಟೋಲ್ ದರ ಏರಿಕೆಯಾಗಲಿದೆ. ಕಾರು, ವ್ಯಾನ್ ಹಾಗೂ ಜೀಪ್ಗೆ ಏಕಮುಖ ಸಂಚಾರ 165 ರೂ. ನಿಗದಿ (30ರೂ. ಹೆಚ್ಚಳ) ಮಾಡಲಾಗಿದೆ.

ದ್ವಿಮುಖ ಸಂಚಾರಕ್ಕೆ 250 ರೂ. (45 ರೂ. ಹೆಚ್ಚಳ), ಲಘು ವಾಹನಗಳು ಹಾಗೂ ಮಿನಿ ಬಸ್ಗೆ 270 ರೂ. (50 ರೂ. ಹೆಚ್ಚಳ), ದ್ವಿಮುಖ ಸಂಚಾರ 405 ರೂ. (75 ರೂ. ಹೆಚ್ಚಳ), ಟ್ರಕ್, ಬಸ್ ಹಾಗೂ ಎರಡು ಆಕ್ಸೆಲ್ ವಾಹನ 565 ರೂ. (165 ರೂ. ಹೆಚ್ಚಳ), ದ್ವಿಮುಖ ಸಂಚಾರ 850 ರೂ. (160 ರೂ. ಹೆಚ್ಚಳ), ಮೂರು ಆಕ್ಸೆಲ್ ವಾಣಿಜ್ಯ ವಾಹನಗಳು ಏಕಮುಖ ಸಂಚಾರ 615 ರೂ. (115 ರೂ. ಹೆಚ್ಚಳ), ದ್ವಿಮುಖ ಸಂಚಾರ 925 ರೂ.

(225 ರೂ. ಹೆಚ್ಚಳ), ಭಾರಿ ಕಟ್ಟಡ ನಿರ್ಮಾಣ ವಾಹಗನಳು, ಅರ್ಥ್ ಮೂವರ್ಸ್ 4-6 ಆಕ್ಸೆಲ್ ವಾಹನಗಳು 885 ರೂ. (165 ರೂ. ಹೆಚ್ಚಳ), ದ್ವಿಮುಖ ಸಂಚಾರ 1,330 ರೂ. (250 ರೂ. ಹೆಚ್ಚಳ), 7 ಅಥವಾ ಅದಕ್ಕಿಂತ ಎಕ್ಸೆಲ್ ವಾಹನಗಳು 1,080 ರೂ. (200 ರೂ. ಹೆಚ್ಚಳ), ದ್ವಿಮುಖ ಸಂಚಾರ 1,620 ರೂ. (305 ರೂ. ಹೆಚ್ಚಳ) ಮಾಡಲಾಗಿದೆ. 

Share this Story:

Follow Webdunia kannada

ಮುಂದಿನ ಸುದ್ದಿ

ಕೆನಡಾದಿಂದ ಅಮೆರಿಕಕ್ಕೆ ಅಕ್ರಮವಾಗಿ ಪ್ರವೇಶಿಸಲು ಯತ್ನ