Select Your Language

Notifications

webdunia
webdunia
webdunia
Thursday, 10 April 2025
webdunia

ಆನ್‌ಲೈನ್‌ ರಮ್ಮಿ ಆಟದ ಗೀಳಿಗೆ ಒಂದು ಸುಂದರ ಕುಟುಂಬವೇ ಬಲಿ

Rummy Online Game

Sampriya

ಹಾಸನ , ಗುರುವಾರ, 15 ಆಗಸ್ಟ್ 2024 (18:49 IST)
ಹಾಸನ: ಸಾಲಭಾದೆಗೆ ಒಂದೇ ಕುಟುಂಬದ ಮೂವರು ಸಾವಿಗೆ ಶರಣಾಗಿರುವ ಘಟನೆ ಹಾಸನ ಜಿಲ್ಲೆ, ಚನ್ನರಾಯಪಟ್ಟಣ ತಾಲ್ಲೂಕಿನ, ಕೆರೆಬೀದಿಯಲ್ಲಿ ನಡೆದಿದೆ.

ಮೃತರನ್ನು ಶ್ರೀನಿವಾಸ್ (43), ಆತನ ಪತ್ನಿ ಶ್ವೇತಾ (36) ಎಂದು ಗುರುತಿಸಲಾಗಿದ್ದು, ಪುತ್ರಿ ನಾಗಶ್ರೀ ನಾಪತ್ತೆಯಾಗಿದ್ದಾಳೆ. ಅವಳಿಗಾಗಿ  ಶೋಧ ಕಾರ್ಯ ಮುಂದುವರೆದಿದೆ. ಕಾರು ಚಾಲಕನಾಗಿ ಶ್ರೀನಿವಾಸ್ ಕೆಲಸ ಮಾಡುತ್ತಿದ್ದ, ಈತನ ಪತ್ನಿ ಶ್ವೇತಾ ಖಾಸಗಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು. ಮಗಳು ನಾಗಶ್ರೀ 7ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಳು.

ಕೊರೊನಾ ಸಂದರ್ಭದಲ್ಲಿ ಚಾಲಕ ಕೆಲಸಬಿಟ್ಟು ಊರಿಗೆ ಬಂದಿದ್ದ ಶ್ರೀನಿವಾಸ್ ರಮ್ಮಿ ಆಟದ ಚಟಕ್ಕೆ ಬಿದ್ದಿದ್ದಾನೆ. ಇದರಿಂದ ಸಾಕಷ್ಟು ಸಾಲ ಮಾಡಿಕೊಂಡಿದ್ದು, ಸಾಲ ಮರು ಪಾವತಿಸುವಂತೆ ಸಾಲ ನೀಡಿದವರು ಪೀಡಿಸುತ್ತಿದ್ದರು. ಇದರಿಂದ ಸಾಲ ವಾಪಾಸ್ ನೀಡಕ್ಕೆ ಆಗದೆ ಸಂಕಷ್ಟಕ್ಕೆ ಒಳಗಾಗಿದ್ದರು.

ಇದೀಗ ಸಾಲಭಾದೆಗೆ ಒಂದೇ ಕುಟುಂಬದ ಇಬ್ಬರು ಸಾವಿಗೆ ಶರಣಾಗಿದ್ದಾರೆ.  ಬಾಲಕಿ ನಾಗಶ್ರೀಗಾಗಿ ಶೋಧಕಾರ್ಯ ನಡೆಯುತ್ತಿದೆ. ಸ್ಥಳಕ್ಕೆ ಎಸ್ಪಿ ಮಹಮದ್ ಸುಜೀತಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ನುಗ್ಗೇಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ದಸರಾ ಚಾಲನೆಗೆ ಬರಲಿದ್ದಾರೆ ದೇಶದ ಪ್ರಮುಖ ವ್ಯಕ್ತಿ, ಅದ್ಧೂರಿ ದಸರಾಗೆ ಹೊಸ ಮೆರಗು ಎಂದ ಎಚ್‌ ಕೆ ಪಾಟೀಲ್