Select Your Language

Notifications

webdunia
webdunia
webdunia
webdunia

ಸಾಲು ಸಾಲು ರಜೆ: 12ವರ್ಷಗಳ ನಂತ್ರ ಮೆಟ್ರೋದಲ್ಲಿ ಹೊಸ ದಾಖಲೆ

Namma Metro

Sampriya

: ಒಂದೇ ದಿನದಲ್ಲಿ 9.17 ಲಕ್ಷ ಮಂದಿ ಮೆಟ್ರೋದಲ್ಲಿ , ಗುರುವಾರ, 15 ಆಗಸ್ಟ್ 2024 (17:11 IST)
Photo Courtesy X
ಬೆಂಗಳೂರು: ಒಂದೇ ದಿನದಲ್ಲಿ 9.17 ಲಕ್ಷ ಮಂದಿ ಮೆಟ್ರೋದಲ್ಲಿ ಪ್ರಯಾಣಿಸುವ ಮೂಲಕ ಹೊಸ ದಾಖಲೆ ನಿರ್ಮಿಸಿದ್ದಾರೆ. ಬುಧವಾರ  9,17,365 ಜನರು ಮೆಟ್ರೋ ಹತ್ತಿ, ಪ್ರಯಾಣ ಬೆಳೆಸಿದ್ದಾರೆ ಎಂದು ಮೆಟ್ರೋ ರೈಲು ಕಾರ್ಪೋರೇಷನ್ ಲಿಮಿಟೆಡ್ ಪ್ರಕಟಿಸಿದೆ.

ಈ ಹಿಂದೆ 2022ರಲ್ಲಿ ಸ್ವಾತಂತ್ರ್ಯ ದಿನದಂದು ಒಂದೇ ದಿನದಲ್ಲಿ  ಗರಿಷ್ಠ 8.26 ಲಕ್ಷವನ್ನು ಜನ ಪ್ರಯಾಣಿಸಿದ್ದರು. ಇದೀಗ ಅದನ್ನು ಮೀರಿ ಈ ಬಾರಿ 9,17 ಲಕ್ಷ ಮಂದಿ ಪ್ರಯಾಣ ಬೆಳೆಸಿ ದಾಖಲೆ ನಿರ್ಮಿಸಿದ್ದಾರೆ.

ನೇರಳೆ ಮಾರ್ಗವು 4.43 ಲಕ್ಷ ಪ್ರಯಾಣಿಕರೊಂದಿಗೆ ಅತಿ ಹೆಚ್ಚು ಪ್ರಯಾಣಿಕರನ್ನು ಹೊಂದಿದೆ, ನಂತರ ಹಸಿರು ಮಾರ್ಗವು 3.01 ಲಕ್ಷ ಸವಾರರನ್ನು ಕಂಡಿದೆ. ಮೆಜೆಸ್ಟಿಕ್‌ನಲ್ಲಿರುವ ನಾಡಪ್ರಭು ಕೆಂಪೇಗೌಡ ಇಂಟರ್‌ಚೇಂಜ್ ನಿಲ್ದಾಣವು 1.72 ಲಕ್ಷ ಪ್ರಯಾಣಿಕರು ಅದರ ಗೇಟ್‌ಗಳ ಮೂಲಕ ಹಾದುಹೋಗುವ ಮೂಲಕ ಸಂಚಾರದ ಗಮನಾರ್ಹ ಭಾಗವನ್ನು ನಿರ್ವಹಿಸಿದೆ.

ಈ ದಾಖಲೆ ಪ್ರಯಾಣಕ್ಕೆ ಸಾಲು ಸಾಲು ರಜೆಗಳು ಕಾರಣವಾಗಿದೆ. ರೈಲು ನಿಲ್ದಾಣಕ್ಕೆ ತಲುಪಲು ಹೆಚ್ಚಿನವರು ಮೆಟ್ರೋವನ್ನು ಹತ್ತಿದ್ದಾರೆ ಎಂದು ಮೆಟ್ರೋ ಅಧಿಕಾರಿಗಳು ಹೇಳಿದ್ದಾರೆ.

ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ಫ್ಲವರ್‌ ಶೋ ನಡೆಯುತ್ತಿದೆ. ಹೀಗೇ  ಲಕ್ಷಾಂತರ ಜನರ ಗುಂಪು ತೋಟದತ್ತ ಆಗಮಿಸುತ್ತಿದ್ದಾರೆ. ಈ ಹಿನ್ನೆಲೆ ಹೆಚ್ಚಿನವರು ಮೆಟ್ರೋ ಮೂಲಕನೇ ಲಾಲ್‌ಬಾಗ್‌ ತಲುಪುತ್ತಿದ್ದಾರೆ. ಅದಲ್ಲದೆ ಸ್ವಾತಂತ್ರ್ಯ ದಿನ ಹಾಗೂ ವರಮಹಾಲಕ್ಷ್ಮೀ ಹಬ್ಬದ ತಯಾರಿ ಭರ್ಜರಿಯಲ್ಲಿ ನಡೆಯುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಭಾರತದ ಪ್ಯಾರಿಸ್ ಒಲಿಂಪಿಕ್ಸ್ ತಂಡವನ್ನು ಭೇಟಿಯಾದ ಮೋದಿ, ಪದಕ ವಿಜೇತರೊಂದಿಗೆ ಪೋಸ್ ಕೊಟ್ಟರು