Select Your Language

Notifications

webdunia
webdunia
webdunia
webdunia

Namma Metro ಪ್ರಯಾಣಿಕರಿಗೆ ಕಹಿ ಸುದ್ದಿ: ಸದ್ಯದಲ್ಲೇ ಮೆಟ್ರೋ ಪ್ರಯಾಣ ದುಬಾರಿಯಾಗೋದು ಗ್ಯಾರಂಟಿ

Namma Metro

Krishnaveni K

ಬೆಂಗಳೂರು , ಮಂಗಳವಾರ, 13 ಆಗಸ್ಟ್ 2024 (09:54 IST)
ಬೆಂಗಳೂರು: ನಮ್ಮ ಮೆಟ್ರೋ ಪ್ರಯಾಣಿಕರಿಗೆ ಸದ್ಯದಲ್ಲೇ ಕಹಿ ಸುದ್ದಿ ಕಾದಿದೆ. ಒಂದೊಂದೇ ದುಬಾರಿಯಾಗುತ್ತಿರುವ ಕಾಲದಲ್ಲಿ ಈಗ ಮೆಟ್ರೋ ಪ್ರಯಾಣ ಕೂಡಾ ದುಬಾರಿಯಾಗಲಿದೆ.

ಇದೀಗ ನಮ್ಮ ಮೆಟ್ರೋ ಮಾರ್ಗ ವಿಸ್ತರಣೆಯಾಗುತ್ತಿದೆ. ಇತ್ತೀಚೆಗೆ ನಮ್ಮ ಮೆಟ್ರೋ ಸ್ಟೇಷನ್ ನಲ್ಲಿ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿವೆ. ಹೀಗಾಗಿ ಎಲ್ಲಾ ಮೆಟ್ರೋ ಸ್ಟೇಷನ್ ಗಳಿಗೂ ಪಿಎಸ್ ಡಿ ಅಳವಡಿಸಲಾಗುತ್ತದೆ. ಇದಕ್ಕೆ 700 ರಿಂದ 800 ಕೋಟಿ ರೂ. ಖರ್ಚಾಗಲಿದೆ.

ಗೊಟ್ಟಿಗೆರೆಯಿಂದ ನಾಗವಾರ, ಸಿಲ್ಕ್ ಬೋರ್ಡ್ ನಿಂದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕಿಸುವ ಬ್ಲೂ ಲೈನ್ ನಲ್ಲಿ ಪಿಎಸ್ ಡಿ ಅಳವಡಿಸಲು ಖಾಸಗಿ ಕಂಪನಿಗೆ 152 ಕೋಟಿ ರೂಪಾಯಿ ವೆಚ್ಚದಲ್ಲಿ ಗುತ್ತಿಗೆ ನೀಡಲಾಗಿದೆ. ಹಳೆಯ ನಿಲ್ದಾಣಗಳಲ್ಲೂ ಪಿಎಸ್ ಡಿ ಅಳವಡಿಸಲಾಗುತ್ತದೆ.

ಇದೆಲ್ಲದಕ್ಕೂ ತಗುಲುವ ವೆಚ್ಚವನ್ನು ಪ್ರಯಾಣಿಕರ ಮೇಲೆ ಹೊರಿಸಲು ಬಿಎಂಆರ್ ಸಿಎಸ್ ಚಿಂತನೆ ನಡೆಸಿದೆ. ಹೀಗಾಗಿ ಸದ್ಯದಲ್ಲೇ ಮೆಟ್ರೋ ಪ್ರಯಾಣ ದರ ಹೆಚ್ಚಳವಾಗಲಿದೆ. ಆದರೆ ಪಿಎಸ್ ಡಿ ಹಾಕಿಸುವ ಹೊರೆಯನ್ನು ಪ್ರಯಾಣಿಕರ ಮೇಲೆ ಹಾಕುತ್ತಿರುವುದಕ್ಕೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮೈಸೂರು ರಾಜಮನೆತನದ ಜೊತೆ ಸಿದ್ದರಾಮಯ್ಯ ಗುದ್ದಾಟ ಇದೇ ಮೊದಲಲ್ಲ