Select Your Language

Notifications

webdunia
webdunia
webdunia
webdunia

ಸೈಬರ್ ಖದೀಮರಿಂದ 70 ವರ್ಷದ ನಿವೃತ್ತ ಇಂಜಿನಿಯರ್ ಒಬ್ಬರ ಖಾತೆಗೆ ಕನ್ನ

ಸೈಬರ್ ಖದೀಮರಿಂದ 70 ವರ್ಷದ ನಿವೃತ್ತ ಇಂಜಿನಿಯರ್ ಒಬ್ಬರ ಖಾತೆಗೆ ಕನ್ನ
bangalore , ಗುರುವಾರ, 1 ಡಿಸೆಂಬರ್ 2022 (20:32 IST)
ಎಲ್ಲವೂ ಆನ್‌ಲೈನ್‌ ಆಗಿರುವ ಇಂದಿನ ಯುಗದಲ್ಲಿ ಪೊಲೀಸರು ಎಷ್ಟೇ ಅರಿವು ಮೂಡಿಸಿದರೂ ಸೈಬರ್ ವಂಚನೆ ಪ್ರಕರಣಗಳು ಮಾತ್ರ ಕಡಿಮೆಯಾಗುತ್ತಿಲ್ಲ. ಕ್ರೆಡಿಟ್ ಕಾರ್ಡ್ ರಿವಾರ್ಡ್ ಪಾಯಿಂಟ್ ಕ್ಲೈಮ್ ಎಂದು ಬ್ಯಾಂಕಿನ ಹೆಸರಿನಲ್ಲಿ ಲಿಂಕ್ ಕಳಿಸಿದ್ದ ಸೈಬರ್ ಖದೀಮರು 70 ವರ್ಷದ ನಿವೃತ್ತ ಇಂಜಿನಿಯರ್ ಒಬ್ಬರ ಖಾತೆಗೆ ಕನ್ನ ಹಾಕಿರುವ ಪ್ರಕರಣ ಆಗ್ನೇಯ ವಿಭಾಗದ ಸಿಇಎನ್ ಠಾಣೆಯಲ್ಲಿ ದಾಖಲಾಗಿದೆ.
 
ದೂರುದಾರರು ತಮ್ಮ ಮೊಬೈಲಿಗೆ ಕ್ರೆಡಿಟ್ ಕಾರ್ಡ್ ರಿವಾರ್ಡ್ ಪಾಯಿಂಟ್ಸ್ ಕ್ಲೈಮ್ ಎಂದು ವಂಚಕರು ಕಳಿಸಿದ್ದ ಲಿಂಕ್‌ ಕ್ಲಿಕ್ ಮಾಡಿದಾಗ ಅಧಿಕೃತ ವೆಬ್‌ಸೈಟ್‌ನ್ನೇ ಹೋಲುವ ನಕಲಿ ವೆಬ್‌ಸೈಟ್ ತೆರೆದಿದೆ. ನೋಡನೋಡುತ್ತಿದ್ದಂತೆ ಖಾತೆಯಲ್ಲಿದ್ದ 1.93 ಲಕ್ಷ ಕಡಿತವಾಗಿದೆ. 
ವಿಚಿತ್ರವೆಂದರೆ ನಿನ್ನೆ ಒಂದೇ ದಿನ ಆಗ್ನೇಯ ವಿಭಾಗದ ಅನೇಕ ಜನರ ನಂಬರಿಗೆ ಇದೇ ರೀತಿ ಕೆವೈಸಿ ಅಪ್ಡೇಟ್, ಕ್ರೆಡಿಟ್ ಕಾರ್ಡ್ ರಿವಾರ್ಡ್ ಪಾಯಿಂಟ್ ಕ್ಲೈಮ್ ಹೆಸರಿನಲ್ಲಿ ಇದೇ ರೀತಿಯ ಮೆಸೆಜುಗಳು ಬಂದಿದ್ದು ಹಲವಾರು ಖಾತೆಗಳಿಗೆ ಸೈಬರ್ ವಂಚಕರು ಕನ್ನ ಹಾಕಿದ್ದಾರೆ. 
 
ಸಿಇಎನ್ ಠಾಣೆಗೆ ಸಾಲು ಸಾಲು ದೂರುಗಳು ಬಂದಿದ್ದು ನೋಯ್ಡಾ ಮೂಲದ ಪೇಟಿಎಂ ಖಾತೆಗೆ ಹಣ ವರ್ಗಾವಣೆಯಾಗಿದೆ ಎಂಬುದನ್ನ ಪತ್ತೆ ಹಚ್ಚಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ ಎಂದು ಆಗ್ನೇಯ ವಿಭಾಗದ ಡಿಸಿಪಿ ಸಿ.ಕೆ.ಬಾಬಾ ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪೋಷಕರೇ ಎಚ್ಚರ ..! ಎಚ್ಚರ..!