Select Your Language

Notifications

webdunia
webdunia
webdunia
webdunia

ವಸ್ತುಗಳನ್ನ ಖರೀದಿಸಿದ್ರೆ ಬೇಗ ಶ್ರೀಮತರಾಗ್ತೀರಿ ಎಂದು ಮೋಸ ಮಾಡ್ತಿದ್ದ ಕಳ್ಳರು ಅಂದರ್

Thieves who cheated that if you buy things
bangalore , ಗುರುವಾರ, 1 ಡಿಸೆಂಬರ್ 2022 (20:25 IST)
ಈ ವಸ್ತುಗಳು ಖರೀದಿಸಿದರೆ ಬೇಗನೇ ಶ್ರೀಮಂತರಾಗುತ್ತೀರಿ. ಅಂತಾ ನಂಬಿಸಿ ಮಾರಾಟ ಮಾಡುತ್ತಿದ್ದ ಆರೋಪಿಗಳು ಅಂದರ್ ಆಗಿದ್ದಾರೆ. ಲೋಹದ ಬಿಂದಿಗೆಯನ್ನು ಮನೆಯಲ್ಲಿ ಇಟ್ಟುಕೊಂಡರೆ ಶ್ರೀಮಂತರಾಗುತ್ತೀರಿ ಎಂದು ಜನರನ್ನ ನಂಬಿಸಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರನ್ನು ವೈಯಾಲಿಕಾವಲ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮೊಹಮ್ಮದ್ ಮುಸ್ತಾಫ, ಮೊಹಮ್ಮದ್ ಮುಬೀನ್ ಎಂಬುವರನ್ನು ಬಂಧಿಸಿ ಒಂದು ಲೋಹದ ಬಿಂದಿಗೆ, ನಂದಿವಿಗ್ರಹ, ಮೂರು ಹಳೆಯ ನಾಣ್ಯಗಳು ಹಾಗೂ ದೂರದರ್ಶಕವನ್ನ ವಶಕ್ಕೆ ಪಡೆದುಕೊಂಡಿದ್ದಾರೆ‌.
ಆರೋಪಿಗಳು ಚಿತ್ರದುರ್ಗದ ಮೊಳಕಾಲ್ಮೂರಿನವರಾಗಿದ್ದು  ವೈಯ್ಯಾಲಿಕಾವಲ್ ಬಳಿಯ ಅಯ್ಯಪ್ಪಸ್ವಾಮಿ ಟೆಂಪಲ್ ಬಳಿ ಲೋಹದ ಬಿಂದಿಗೆ ಸೇರಿ ಇನ್ನಿತರ ವಸ್ತುಗಳನ್ನು ಮಾರಾಟಕ್ಕೆ ಮುಂದಾಗಿರುವ  ಖಚಿತ ಮಾಹಿತಿ ಅರಿತ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಹಳೆಯ ವಸ್ತುಗಳನ್ನ ಮನೆಯಲ್ಲಿ‌ ಇಟ್ಟುಕೊಂಡರೆ ಬೇಗನೇ ಶ್ರೀಮಂತರಾಗುತ್ತೀರಿ ಎಂದು ಗ್ರಾಹಕರನ್ನು ನಂಬಿಸಿ ಮಾರಾಟಕ್ಕೆ ಮುಂದಾಗಿದ್ರು ಎಂದು ಡಿಸಿಪಿ ಶ್ರೀನಿವಾಸಗೌಡ ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರೆಸ್ಟೋರೆಂಟ್ ಸಿಬ್ಬಂದಿ ಮೇಲೆ ಹಲ್ಲೆ ಸಂಬಂಧ 7 ಜನರ ಬಂಧನ