Publish Date: Thu, 01 Dec 2022 (20:21 IST)
Updated Date: Thu, 01 Dec 2022 (20:24 IST)
ರೆಸ್ಟೋರೆಂಟ್ ಸಿಬ್ಬಂದಿ ಮೇಲೆ ಹಲ್ಲೆ ಪ್ರಕರಣದಲ್ಲಿಭಾಗಿಯಾಗಿದ್ದ ಏಳು ಮಂದಿ ಬಂಧನವಾಗಿದೆ.ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣಾ ವ್ಯಾಪ್ತಿಯ ಸಿಟಿ ವಿಲೇಜ್ ರೆಸ್ಟೋರೆಂಟ್ ಸಿಬ್ಬಂದಿ ಮೇಲೆ ಹಲ್ಲೆ ಪ್ರಕರಣ ಸಂಬಂಧ ಏಳು ಮಂದಿ ಆರೋಪಿಗಳನ್ನ ಬಂಧಿಸಲಾಗಿದೆ.ರೆಸ್ಟೋರೆಂಟ್ ಸಿಬ್ಬಂದಿ ನೀಡಿದ ದೂರಿನ ಮೇರೆಗೆ ಶಂಕರ್, ಕೀರ್ತಿ, ಅಭಿಷೇಕ್,ಪ್ರವೀಣ್ ಕುಮಾರ್, ಹೇಮಂತ್ ಕುಮಾರ್, ಅಭಿಷೇಕ್, ಅಭಿಲಾಷ್ ಎಂಬುಬರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ . ತಿಂಗಳು 21ರ ರಾತ್ರಿ 11.30 ಸುಮಾರಿಗೆ ಹೆಬ್ಬಗೋಡಿಯಿಂದ ನಿಲಾದ್ರಿ ನಗರ ಸಿಟಿ ವಿಲೇಜ್ ರೆಸ್ಟೋರೆಂಟ್ ಆರೋಪಿಗಳು ಬಂದಿದ್ದಾರೆ. ಆರೋಪಿಗಳ ಪೈಕಿ ಓರ್ವ ಬರ್ತ್ ಡೇ ಹಿನ್ನೆಲೆಗಾಗಿ ಊಟಕ್ಕಾಗಿ ಬಂದಿದ್ದರು. ಈ ವೇಳೆ ರೆಸ್ಟೋರೆಂಟ್ ಕ್ಲೋಸ್ ಸಮಯವಾಗಿದ್ದರಿಂದ ಊಟ ಸಿದ್ದಪಡಿಸಲು ಸಾಧ್ಯವಿಲ್ಲ ಎಂದಿದಕ್ಕೆ ಸಿಬ್ಬಂದಿ ಮೇಲೆ ಮನಸೋ ಇಚ್ಚೆ ಹಲ್ಲೆ ನಡೆಸಿ ಪರಾರಿಯಾಗಿದ್ದರು. ಇದೆ ಸಮಯದಲ್ಲಿ ಹೋಟೆಲ್ ನಲ್ಲಿಊಟಕ್ಕೆ ಬಂದಿದ್ದ ಇತರೇ ಗ್ರಾಹಕರು ಗಲಾಟೆಯ ದೃಶ್ಯಗಳನ್ನು ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದರು ಇದರ ಆಧಾರದ ಮೇಲೆ ಪರಿಶೀಲನೆ ನಡೆಸಿದ ಪೊಲೀಸರು ಸದ್ಯ ಏಳು ಮಂದಿ ಆರೋಪಿಗಳನ್ನು ಬಂಧಿಸಲಾಗಿದ್ದು ಕೃತ್ಯದಲ್ಲಿ ಇನ್ನೂ ಕೆಲವರು ಭಾಗಿಯಾಗಿದ್ದು ಅವರ ಶೋಧಕಾರ್ಯ ಚುರುಕುಗೊಳಿಸಲಾಗಿದೆ ಎಂದು ಡಿಸಿಪಿ ಸಿಕೆ ಬಾಬಾ ಹೇಳಿದ್ದಾರೆ.ಈ ಹಿಂದೆ ಯಾವುದಾದರೂ ಅಪರಾದ ಕೃತ್ಯಗಳಲ್ಲಿ ಭಾಗಿಯಾಗಿದ್ದರಾ ಎಂಬುದುನ್ನ ಕುರಿತು ಸಹ ತನಿಖೆ ನಡೆಸುತ್ತಿದ್ದಾರೆ.