Publish Date: Thu, 01 Dec 2022 (18:18 IST)
Updated Date: Thu, 01 Dec 2022 (18:21 IST)
ಬಿಜೆಪಿಗೆ ರೌಡಿಶೀಟರ್‌ಗಳ ಸೇರ್ಪಡೆ ವಿಚಾರವಾಗಿ ಬಿಜೆಪಿ ವಿರುದ್ದ ಡಿಕೆಶಿ ಟೀಕೆ ಮಾಡಿದ್ದಾರೆ.ಬಿಜೆಪಿಯವರಿಗೆ ಕುಸ್ತಿ ಮಾಡಲು ಜನ ಬೇಕಲ್ಲ.ಕುಸ್ತಿ ಮಾಡಲು ಅವರ ಬಳಿ ಜನ ಇಲ್ಲ.ಕುಸ್ತಿ ಮಾಡಲು ಸೇರಿಸಿಕೊಳ್ಳುತ್ತಿದ್ದಾರೆ,ಸೇರಿಸಿಕೊಳ್ಳಲಿ.ಒಳ್ಳೆಯ ಮುಖ ಬೇಕಲ್ವಾ ಅವರಿಗೆ ಬಿಜೆಪಿಗೆ ಯಾವ ಸಿದ್ದಾಂತವಿದೆ,ಏನು ಸಿದ್ದಾಂತವಿದೆ.ಭಾವೆನೆಗೂ ಬದುಕಿಗೂ ವ್ಯತ್ಯಾಸವಿದೆ.ಬಿಜೆಪಿಯವರು ಭಾವನೆಗಳ ಮೇಲೆ ರಾಜಕೀಯ ಮಾಡ್ತಾರೆ.ಬದುಕಿನ ಮೇಲೆ ಜನರ ನೋವಿಗೆ ಸ್ಪಂದಿಸುವ ಕೆಲಸ ಮಾಡಲ್ಲ.ಜನರ ಭಾವನೆಗಳ ಮೇಲೆ ರಾಜಕೀಯ ಮಾಡೋದು ಬಿಜೆಪಿ ಸಿದ್ದಾಂತ.ಜನರಿಗೆ ಒಳ್ಳೆದು ಮಾಡಬೇಕು ಎಂಬುದು ಕಾಂಗ್ರೆಸ್ ಸಿದ್ದಾಂತ ಎಂದು ಡಿಕೆಶಿ ಟೀಕೆ ಮಾಡಿದ್ದಾರೆ.