Publish Date: Thu, 07 Mar 2019 (06:37 IST)
Updated Date: Thu, 07 Mar 2019 (06:51 IST)
ಮುಂಬೈ : 16 ವರ್ಷದ ಬಾಲಕಿಯ ಮೇಲೆ ನಾಲ್ವರು ಬಸ್ ನಿರ್ವಾಹಕರು ಸೇರಿಕೊಂಡು ಏಳು ತಿಂಗಳ ಕಾಲ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ನಾಗ್ಪುರದಲ್ಲಿ ನಡೆದಿದೆ.
ಉಮೇಶ್ ಅಲಿಯಾಸ್ ವರ್ಷಾಪಾಲ್ ಮೊರೇಶ್ವರ್ ಮೆಶ್ರಾಮ್ (22), ಧರ್ಮಪಾಲ್ ದಾದರಾವ್ ಮೆಶ್ರಾಮ್ (22), ಆಶಿಶ್ ಕಾಶಿನಾಥ ಲೋಕಾಂಡೆ (25) ಮತ್ತು ಅಜಯ್ (22) ಅತ್ಯಾಚಾರ ಎಸಗಿದ ಕಾಮುಕರು. ಬಸ್ಸಿನಲ್ಲಿ ಕಾಲೇಜಿಗೆ ಹೋಗುತ್ತಿದ್ದ ಬಾಲಕಿಯನ್ನು ಬಸ್ ಕಂಡಕ್ಟರ್ ಆರೋಪಿ ಧರ್ಮಾಪಾಲ್ ಮೆಶ್ರಾಮ್ ಪರಿಚಯ ಮಾಡಿಕೊಂಡು ಸ್ನೇಹ ಬೆಳೆಸಿಕೊಂಡಿದ್ದಾನೆ. ನಂತರ ಬಾಡಿಗೆ ಮನೆಯೊಂದಕ್ಕೆ ಬಾಲಕಿಯನ್ನ ಕರೆದುಕೊಂಡು ಹೋಗಿ ಬಸ್ ಕಂಡೆಕ್ಟರ್ ಹಾಗೂ ಆತನ ಸ್ನೇಹಿತರು ಸೇರಿ ಆಕೆಯ ಮೇಲೆ ಏಳು ತಿಂಗಳ ಕಾಲ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ.
ಘಟನೆಯ ಬಳಿಕ ಗರ್ಭಿಣಿಯಾದ ಸಂತ್ರಸ್ತೆ ಮನೆಯವರಿಗೆ ತಿಳಿದರೆ ಭಯಪಡುತ್ತಾರೆ ಎಂದು ಮನೆ ಬಿಟ್ಟು ಹೋಗಿದ್ದಾಳೆ. ಮಗಳು ಕಾಣದಿದ್ದಾಗ ಆಕೆಯ ಪೋಷಕರು ಪೊಲೀಸರಿಗೆ ನಾಪತ್ತೆ ದೂರು ನೀಡಿದ್ದಾರೆ. ತನಿಖೆ ನಡೆಸಿದ ಪೊಲೀಸರಿಗೆ ಸಂತ್ರಸ್ತೆ ಸಿಕ್ಕಿದ್ದು, ಆ ವೇಳೆ ಆಕೆ ತನ್ನ ಮೇಲೆ ನಡೆದ ಲೈಂಗಿಕ ದೌರ್ಜನ್ಯದ ಬಗ್ಗೆ ವಿವರಿಸಿದ್ದಾಳೆ. ಸಂತ್ರಸ್ತೆಯ ದೂರಿನ ಆಧಾರದ ಮೇರೆಗೆ ಸೆಕ್ಷನ್ 376 (2) ಮತ್ತು ಪೋಕ್ಸೋ ಕಾಯ್ದೆಯಡಿಯಲ್ಲಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.