Select Your Language

Notifications

webdunia
webdunia
webdunia
webdunia

ಸೇವಾ ನಿವೃತ್ತಿ ಹೊಂದಿರುವ 67 ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಸನ್ಮಾನ

67 Retired Officers
bangalore , ಗುರುವಾರ, 30 ಜೂನ್ 2022 (20:20 IST)
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಯಲ್ಲಿ ಸುದೀರ್ಘವಾಗಿ ಸೇವೆ ಸಲ್ಲಿಸಿ ಇದೇ ತಿಂಗಳಲ್ಲಿ ಸೇವಾ ನಿವೃತ್ತಿ ಹೊಂದಿರುವ 67 ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್ ಸನ್ಮಾನಿಸಿ ಬೀಳ್ಕೊಟ್ಟಿದ್ದಾರೆ. ಇವರ ಸುದೀರ್ಘ ಸೇವೆಯನ್ನು ಸ್ಮರಿಸಿ ಪಾಲಿಕೆ ಆಡಳಿತ ವಿಭಾಗದ ವತಿಯಿಂದ ಇದೇ ಪ್ರಪಥಮ ಬಾರಿಗೆ ಪಾಲಿಕೆ ಕೇಂದ್ರ ಕಛೇರಿಯ ಆವರಣದಲ್ಲಿರುವ ಡಾ. ರಾಜ್ ಕುಮಾರ್ ಗಾಜಿನ ಮನೆಯಲ್ಲಿ ಸನ್ಮಾನಿಸಿ ಬೀಳ್ಕೊಡಲಾಯಿತು. ಇದೇ ರೀತಿ ಪ್ರತಿ ತಿಂಗಳ ಕೊನೆಯ ದಿನ ನಿವೃತ್ತಿ ಹೊಂದಿದ ಎಲ್ಲಾ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಗೌರವ ಸಮರ್ಪಣೆ ಮಾಡಿ ಬೀಳ್ಕೊಡಲಾಗುತ್ತದೆಂದು ಈ ಸಂಧರ್ಭದಲ್ಲಿ ತಿಳಿಸಿದರು. ಈ ವೇಳೆ ಉಪ ಆಯುಕ್ತರಾದ ಯೋಗೇಶ್ ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಜುಲೈ 1 ರಿಂದ ಬ್ಯಾನ್ ಆಗಲಿರುವ ಪ್ಲಾಸ್ಟಿಕ್