Select Your Language

Notifications

webdunia
webdunia
webdunia
webdunia

ರಾತ್ರಿ ನುಗ್ಗಿ 6 ಲಕ್ಷ ದರೋಡೆ

Crime
ಏಜೆನ್ಸಿಯೊಂದಕ್ಕೆ ನುಗ್ಗಿದ ನಾಲ್ವರು ದರೋಡೆಕೋರರು ನೌಕರರನ್ನು ಬೆದರಿಸಿ ಲಾಂಗ್‍ನಿಂದ ಹಲ್ಲೆ ನಡೆಸಿ 6 ಲಕ್ಷ ಹಣ ದರೋಡೆ ಮಾಡಿ ಪರಾರಿಯಾಗಿರುವ ಘಟನೆ ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ನಾಗರಬಾವಿಯ 9ನೆ ಬ್ಲಾಕ್‍ನಲ್ಲಿ ಸುಧಾ ಎಂಬ ಏಜೆನ್ಸಿ ಇದೆ. ಇಲ್ಲಿ ಕ್ಯಾಡ್‍ಬರೀಸ್, ಎವರೆಸ್ಟ್ ಮಸಾಲಾ ಪದಾರ್ಥಗಳನ್ನು ಡಿಸ್ಟ್ರಿಬ್ಯೂಟ್ ಮಾಡಲಾಗುತ್ತದೆ.
 
ಸುಧಾ ಏಜೆನ್ಸಿಯು ಗೋದಾಮು ಹಾಗೂ ಕಚೇರಿ ಒಳಗೊಂಡಿರುತ್ತದೆ. ಮೊನ್ನೆ ರಾತ್ರಿ 8.30ರ ಸಮಯದಲ್ಲಿ ಬೈಕ್‍ಗಳಲ್ಲಿ ಬಂದ ನಾಲ್ಕೈದು ಮಂದಿ ದರೋಡೆಕೋರರು ನೌಕರರನ್ನು ಬೆದರಿಸಿ ಲಾಂಗ್‍ನಿಂದ ಹಲ್ಲೆ ಮಾಡಿ ಕ್ಯಾಶ್‍ಬಾಕ್ಸ್‍ನಲ್ಲಿದ್ದ 6 ಲಕ್ಷ ಹಣ ದರೋಡೆ ಮಾಡಿಕೊಂಡು ಪರಾರಿಯಾಗಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಡ್ರಗ್ಸ್ ಪೆಡ್ಲೆರ್ ಬಂಧನ