Select Your Language

Notifications

webdunia
webdunia
webdunia
webdunia

ವೈದ್ಯರಿಗೇ ಬರೊಬ್ಬರಿ 6 ಕೋಟಿ ರೂ. ವಂಚನ

ವೈದ್ಯ
ಬೆಂಗಳೂರು: ಡಾ. ಗಿರೀಶ್‌ ಬಳಿ ಸೌಂದರ್ಯವರ್ಧಕ ಚಿಕಿತ್ಸೆಗಾಗಿ ಬಂದಿದ್ದ ಐಶ್ವರ್ಯಾ ಗೌಡ ಕ್ರಮೇಣ ಅವರಿಗೆ ಆಪ್ತಳಾಗಿದ್ದಳು. ತನಗೆ ದೊಡ್ಡ ದೊಡ್ಡ ವ್ಯಕ್ತಿಗಳ ಪರಿಚಯವಿದೆ ಎಂದು ಬೂಸಿ ಬಿಟ್ಟಿದ್ದ ಐಶ್ವರ್ಯಾ ತನ್ನ ಪ್ರಭಾವ ಬಳಸಿ ದುಬಾರಿ ಐಷಾರಾಮಿ ಕಾರ್‌ ನ್ನು ಕಡಿಮೆ ಬೆಲೆಯಲ್ಲಿ ಕೊಡಿಸುವುದಾಗಿ ಆಮಿಷ ತೋರಿದ್ದಳು. ಹಂತಹಂತವಾಗಿ ಅವರಿಂದ 6 ಕೋಟಿ ರೂ. ವಸೂಲಿ ಮಾಡಿದ್ದಳು.ಕಾಸ್ಮೆಟಿಕ್‌ ಸರ್ಜರಿಗೆಂದು ಬಂದ ಯುವತಿಯೊಬ್ಬಳು ದುಬಾರಿ ಕಾರ್‌ ನ್ನು ಕಡಿಮೆ ಬೆಲೆಯಲ್ಲಿ ಕೊಡಿಸುವುದಾಗಿ ಆಮಿಷ ತೋರಿಸಿ ವೈದ್ಯರಿಗೇ ಬರೊಬ್ಬರಿ 6 ಕೋಟಿ ರೂ. ವಂಚಿಸಿರುವ ಪ್ರಕರಣ ವಿಜಯನಗರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.  

ಐಶ್ವರ್ಯಾ ವಂಚನೆ ಅರಿವಾದ ಬಳಿಕ ಹಣ ಕೇಳಿದ್ದಕ್ಕೆ ಅವರ ಮೇಲೆ ಅತ್ಯಾಚಾರ ಮಾಡಲು ಯತ್ನಿಸಿದರೆಂದು ದೂರು ನೀಡುವುದಾಗಿ ಬೆದರಿಕೆ ಹಾಕಿದ್ದಳು. ಇದಿರಿಂದ ಬೇಸತ್ತ  ಡಾ. ಗಿರೀಶ್‌ವಂಚನೆಗೊಳಗಾದ ವ್ಯಕ್ತಿಯಾಗಿದ್ದು, ಐಶ್ವರ್ಯಾ ಗೌಡ ಎಂಬ ಮಹಿಳೆಯ ವಿರುದ್ದ ವಿಜಯನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕರ್ನಾಟಕ ರಾಜ್ಯ 100 ರೂ. ನೀಡಿದರೆ ಕೇಂದ್ರ ಸರ್ಕಾರವು 12 ರೂ. ನೀಡುತ್ತಿದೆ-ಸಿಎಂ