Select Your Language

Notifications

webdunia
webdunia
webdunia
webdunia

ಕಾಲೇಜು ಯುವತಿಗೆ ಪೋಲಿ ಮೆಸೇಜ್‌

crime
ಗದಗ : ವಿದ್ಯಾರ್ಥಿನಿಯ ನಂಬರ್‌ ಗಳಿಸಿದ್ದ ಪೊಲೀಸರು ಅಶ್ಲೀಲವಾಗಿ ಮೆಸೇಜ್‌ ಗಳನ್ನು ಮಾಡಿದ್ದಲ್ಲದೇ ಹಣ ನೀಡುತ್ತೇವೆ ಹತ್ತಿರ ಬಾ ಎಂದು ತಮ್ಮ ಕಾಮಚೇಷ್ಟೆ ಮೆರೆದಿದ್ದರು. ಈ ಬಗ್ಗೆ ಪೊಲೀಸ್‌ ವರಿಷ್ಠರಿಗೆ ದೂರು ನೀಡುವುದಾಗಿ ವಿದ್ಯಾರ್ಥಿನಿ ಹೇಳಿದ್ದರೂ ಇಬ್ಬರೂ ಸೊಪ್ಪು ಹಾಕಿರಲಿಲ್ಲ. ನರೇಗಲ್‌ ಠಾಣೆಯ ಪಿಎಸ್‌ಐ ನಿಖಿಲ್‌ ಕಾಂಬ್ಳೆ ಮತ್ತು ಕಾನ್ಸ್‌ಟೇಬಲ್‌ ಶಂಕರ್‌ ನಾಲಕರ್‌ ವಿರುದ್ದ ಯುವತಿ ದೂರು ನೀಡಿದ್ದಳು.ಬೇಸತ್ತ ವಿದ್ಯಾರ್ಥಿನಿ ಎಸ್‌ಪಿ ಬಿ.ಎಸ್‌. ನೇಮಗೌಡ ಬಳಿ ದೂರು ದಾಖಲಿಸಿದ್ದಳು. ಕಾಲೇಜು ವಿದ್ಯಾರ್ಥಿನಿಗೆ ಕಿರುಕುಳ ಹಾಗೂ ಅಶ್ಲೀಲ ಸಂದೇಶಗಳನ್ನು ಕಳಿಸಿದ ಆರೋಪದ ಮೇಲೆ ಇಬ್ಬರು ಪೊಲೀಸ್‌ ಸಿಬ್ಬಂದಿಯನ್ನು ಕರ್ತವ್ಯದಿಂದ ವಜಾಗೊಳಿಸಲಾಗಿದೆ. 

Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿ ತಮ್ಮ ಅಧಿಕಾರಾವಧಿಯಲ್ಲಿ ಏನು ಮಾಡಿದೆ ಎಂದು ಡಿ.ಕೆ.ಶಿ ಪ್ರಶ್ನೆ