Publish Date: Mon, 05 Feb 2024 (19:20 IST)
Updated Date: Mon, 05 Feb 2024 (18:41 IST)
ಬೆಂಗಳೂರು : ರೈತರಿಗೆ ಸಿದ್ದರಾಮಯ್ಯ ಸರ್ಕಾರ ಪರಿಹಾರ ನೀಡಿದೆ. ನೀರಾವರಿ ವ್ಯವಸ್ಥೆ ಮಾಡಲಾಗಿದೆ. ಆದರೆ ಬಿಜೆಪಿ ವೃಥಾ ಆರೋಪದಲ್ಲಿ ಕಾಲಹರಣ ಮಾಡುತ್ತಿದೆ ಎಂದ ಡಿಕೆಶಿ, ದೆಹಲಿಯಲ್ಲಿ ನಡೆಯುವ ಪ್ರತಿಭಟನೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಸಂಸದರೂ ಸಹ ಪಾಲ್ಗೊಳ್ಳಲಿ ಎಂದು ಆಹ್ವಾನಿಸಿದರು. ನಮ್ಮದು ಡಬಲ್ ಎಂಜಿನ್ ಸರ್ಕಾರ ಎಂದು ಹೇಳುತ್ತಿದ್ದ ಬಿಜೆಪಿ ತಮ್ಮ ಅಧಿಕಾರಾವಧಿಯಲ್ಲಿ ರಾಜ್ಯಕ್ಕೆ ಏನು ಮಾಡಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರಶ್ನಿಸಿದ್ದಾರೆ. ಭಾನುವಾರ ತಮ್ಮ ನಿವಾಸದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕನಿಷ್ಠ ಒಂದು ಬರ ಪರಿಹಾರ ಸಭೆ ಕರೆಯಲೂ ಸಹ ಬಿಜೆಪಿಯವರಿಗೆ ಸಾಧ್ಯವಾಗಲಿಲ್ಲ ಎಂದು ಕಿಡಿಕಾರಿದರು.
ಕಾಂಗ್ರೆಸ್ ಆಡಳಿತಾವಧಿಯಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಕೂಡ ರಾಜ್ಯಕೆಕ ನೀಡಿರುವ ಅನುದಾನವನ್ನು ದಾಖಲೆ ಸಹಿತ ಬಹಿರಂಗಪಡಿಸುತ್ತೇವೆ ಎಂದು ಬಿಜೆಪಿಯವರು ನೀಡಿರುವ ಹೇಳಿಕಗೆ ಪ್ರತಿಕ್ರಿಯೆ ನೀಡಿದ ಡಿ.ಕೆ. ಶಿವಕುಮಾರ್, ಮನಮೋಹನ್ ಸಿಂಗ್ ಸರ್ಕಾರ ಮುಗಿದು ಹತ್ತು ವರ್ಷವಾಯಿತು . ಬಿಜೆಪಿ ತಮ್ಮ ಸಾಧನೆ ಬಗ್ಗೆ ಹೇಳಲಿ ಎಂದರು.