ಬಿಬಿಎಂಪಿ ಕಸದ ಲಾರಿಗಳು ಬೆಂಗಳೂರು ನಗರದಲ್ಲಿ 40 ಕಿ.ಮೀ. ಕ್ಕಿಂತ ವೇಗವಾಗಿ ಚಲಾಯಿಸುವಂತಿಲ್ಲ ಎಂದು ಬೆಂಗಳೂರು ಸಂಚಾರಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ಆದೇಶಿಸಿದ್ದಾರೆ.
ಬೆಂಗಳೂರಿನಲ್ಲಿ ಕಸದ ಲಾರಿಗಳಿಗೆ ಬಲಿಯಾಗುವವರ ಸಂಖ್ಯೆ ಹೆಚ್ಚಾಗುತ್ತಿದೆ. ಕಳೆದ 4 ತಿಂಗಳಲ್ಲಿ ಕಸದ ಲಾರಿಗೆ ನಾಲ್ವರು ಬಲಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ದುರ್ಘಟನೆ ತಡೆಯಲು ಕ್ರಮ ಕೈಗೊಂಡಿದೆ.
ಬಿಬಿಎಂಪಿ ಕಸದ ಲಾರಿ ಚಾಲಕರಿಗೆ ವಿಶೇಷ ತರಬೇತಿ ನೀಡಲಾಗುವುದು. ಶಾಲಾ ವಲಯ ಮತ್ತು ಅಪಘಾತ ವಲಯಗಳ ಬಗ್ಗೆ ಅವರಿಗೆ ಮನವರಿಕೆ ಮಾಡಿಕೊಡಲಾಗುವುದು ಎಂದು ರವಿಕಾಂತೇಗೌಡ ತಿಳಿಸಿದ್ದಾರೆ.