Select Your Language

Notifications

webdunia
webdunia
webdunia
webdunia

3 ರೂ. ಹೆಚ್ಚಳಕ್ಕೆ KMF ಮನವಿ

3 Rs. KMF appeals for increase
bangalore , ಗುರುವಾರ, 28 ಏಪ್ರಿಲ್ 2022 (19:21 IST)
ಕರ್ನಾಟಕ ಹಾಲು ಮಾರಾಟ ಮಹಾಮಂಡಲವು (KMF) ಹಾಲಿನ ದರ ಹೆಚ್ಚಿಸುವಂತೆ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡಿದೆ. ಪ್ರತಿ ಲೀಟರ್​​​ ಹಾಲಿಗೆ  3 ರೂ. ಹೆಚ್ಚಿಸಬೇಕು ಎಂದು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಮನವಿ ಸಲ್ಲಿಸಿದ್ದಾರೆ..ಮೇ 1ರಿಂದಲೇ ಪರಿಷ್ಕೃತ ದರ ಜಾರಿ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಅಮೂಲ್ ಸೇರಿದಂತೆ ವಿವಿಧ ಖಾಸಗಿ ಸಂಸ್ಥೆಗಳು ಈಗಾಗಲೇ ಹಾಲಿನ ದರ ಹೆಚ್ಚಿಸಿವೆ. ನಂದಿನಿ ಹಾಲಿನ ದರಕ್ಕೆ ಹೋಲಿಸಿದರೆ ಇತರ ಸಂಸ್ಥೆಗಳ ಹಾಲಿನ ದರವು ಲೀಟರ್​​ಗೆ 8ರಿಂದ 10 ರೂಪಾಯಿ ಹೆಚ್ಚಿದೆ..ಹಾಗಾಗಿ ಹಾಲಿನದರವನ್ನು ಲೀಟರ್​​ಗೆ ಕನಿಷ್ಠ 3ರೂ. ಹೆಚ್ಚಿಸಬೇಕು ಎಂದು ಸಿಎಂ ಬಸವರಾಜ ಬೊಮ್ಮಾಯಿಗೆ ಬಾಲಚಂದ್ರ ಜಾರಕಿಹೊಳಿ ಮನವಿ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಗಿ ಖರೀದಿಗೆ ಸ್ಥಗಿತ- ಪರದಾಡಿದ ರೈತರು