ಬೆಂಗಳೂರು : ದ್ವಿಚಕ್ರ ವಾಹನ ಸವಾರನೊಬ್ಬ ಬರೋಬ್ಬರಿ ಮೂರು ಲಕ್ಷ ರೂ. ದಂಡ ತೆರಬೇಕಾದ ಪ್ರಸಂಗ ಎದುರಾಗಿದೆ.ಸಂಚಾರ ನಿಯಮ ಉಲ್ಲಂಘನೆ ಮಾಡಿದ ಈತನ ವಿರುದ್ದ ಸುಮಾರು 300 ಕ್ಕೂ ಹೆಚ್ಚು ಪ್ರಕರಣಗಳಿದ್ದು, ನಗರದಲ್ಲೇ ಅತಿ ಹೆಚ್ಚು ಬಾರಿ ಸಂಚಾರ ನಿಯಮ ಉಲ್ಲಂಘನೆ ಮಾಡಿದ ದಾಖಲೆಗೆ ಈ ವ್ಯಕ್ತಿ ಪಾತ್ರನಾಗಿದ್ದಾನೆ. ಸುಧಾಮ ನಗರ ನಿವಾಸಿ ವೆಂಕಟ್ರಾಮನ್ ತನ್ನ KA05-KF7969 ಸಂಖ್ಯೆಯ ಹೋಂಡಾ ಆಕ್ಟಿವಾದಲ್ಲಿ ನಗರಾದ್ಯಂತ ಹಲವು ಬಾರಿ ಸಂಚಾರ ನಿಯಮ ಉಲ್ಲಂಘಿಸಿದ್ದಾನೆ.
ಈತನ ಮನೆಗೆ ತೆರಳಿ ದಂಡ ಕಟ್ಟಿಸಿಕೊಳ್ಳಲು ಸಂಚಾರ ವಿಭಾಗದ ಪೊಲೀಸರು ಮುಂದಾಗಿದ್ದಾರೆ. ಸಿಗ್ನಲ್ ಜಂಪ್, ಒನ್ ವೇ ಡ್ರೈವಿಂಗ್, ಹೆಲ್ಮೆಟ್ ರಹಿತ ಚಾಲನೆಯಲ್ಲಿಯೂ ವೆಂಕಟ್ರಾಮನ್ ದಾಖಲೆ ಬರೆದಿದ್ದಾನೆ.