Select Your Language

Notifications

webdunia
webdunia
webdunia
webdunia

ರಾಜ್ಯದಲ್ಲಿ 33 ದಿನಗಳಲ್ಲಿ 285 ಹೊಸ ಬ್ಲ್ಯಾಕ್ ಫಂಗಸ್ ಪ್ರಕರಣ

ರಾಜ್ಯದಲ್ಲಿ 33 ದಿನಗಳಲ್ಲಿ 285 ಹೊಸ ಬ್ಲ್ಯಾಕ್ ಫಂಗಸ್ ಪ್ರಕರಣ
ಬೆಂಗಳೂರು , ಶುಕ್ರವಾರ, 20 ಆಗಸ್ಟ್ 2021 (11:54 IST)
ಬೆಂಗಳೂರು,ಆ.20: ರಾಜ್ಯದಲ್ಲಿ ಕಳೆದ 33 ದಿನಗಳಲ್ಲಿ 285 ಹೊಸ ಬ್ಲ್ಯಾಕ್ ಫಂಗಸ್(ಮ್ಯೂಕೋರ್ಮೈಕೋಸಿಸ್ ) ಪ್ರಕರಣಗಳು ವರದಿಯಾಗಿದ್ದು, ಆ.18ಕ್ಕೆ ಬ್ಲ್ಯಾಕ್ ಫಂಗಸ್ ಸೋಂಕಿತರ ಸಂಖ್ಯೆ 3,836ಕ್ಕೆ ಏರಿಕೆಯಾಗಿದೆ.

ಕೋವಿಡ್-19 ಸಂಬಂಧಿತ ಬ್ಲ್ಯಾಕ್ ಫಂಗಸ್ ರೋಗಿಗಳ ಸಂಖ್ಯೆ ಬೆಂಗಳೂರು ನಗರದಲ್ಲಿ 1,207, ಧಾರವಾಡದಲ್ಲಿ 342, ವಿಜಯಪುರ 228, ಕಲಬುರಗಿ 213 ಮತ್ತು ಬಳ್ಳಾರಿ 169 ಪ್ರಕರಣಗಳು ಪತ್ತೆಯಾಗಿವೆ.
ಈ ರೋಗದಿಂದ ಉಂಟಾದ ಒಟ್ಟು ಸಾವುಗಳ ಸಂಖ್ಯೆ 441, ಬೆಂಗಳೂರಿನಲ್ಲಿ ಅತಿ ಹೆಚ್ಚು ಅಂದರೆ 149 ಮಂದಿ ಬ್ಲ್ಯಾಕ್ ಫಂಗಸ್ ಗೆ ಬಲಿಯಾಗಿದ್ದಾರೆ. ನಂತರ ಧಾರವಾಡದಲ್ಲಿ 40, ಬಳ್ಳಾರಿಯಲ್ಲಿ 28, ದಕ್ಷಿಣ ಕನ್ನಡದಲ್ಲಿ 25 ಮತ್ತು ಕಲಬುರಗಿಯಲ್ಲಿ 24 ಮಂದಿ ಮೃತಪಟ್ಟಿದ್ದಾರೆ.
ಕೋವಿಡ್ ಎರಡನೇ ಅಲೆ ಹೆಚ್ಚಾದಾಗ ನಾವು ನೋಡಿದ ಸಂಖ್ಯೆಗೆ ಹೋಲಿಸಿದರೆ, ರಾಜ್ಯದಲ್ಲಿ ಬ್ಲ್ಯಾಕ್ ಫಂಗಸ್ ಪ್ರಕರಣಗಳ ದೈನಂದಿನ ಸಂಖ್ಯೆ ಕಡಿಮೆಯಾಗಿದೆ. ಈ ಕುಸಿತವು ಕೋವಿಡ್ ಪ್ರಕರಣಗಳ ಇಳಿಕೆಗೆ ಅನುಗುಣವಾಗಿರಬಹುದು ಎಂದು ತಜ್ಞರು ತಿಳಿಸಿದ್ದಾರೆ.
ಕಡಿಮೆ ರೋಗನಿರೋಧಕ ಶಕ್ತಿ ಹೊಂದಿರುವ ಕೋವಿಡ್ ರೋಗಿಗಳ ಸ್ಥಿತಿ ಗಂಭೀರವಾಗುತ್ತಿದೆ. ವೆಂಟಿಲೇಟರ್ ಮತ್ತು ಸ್ಟೀರಾಯ್ಡ್ಗಳನ್ನು ಹೆಚ್ಚಾಗಿ ಬಳಸುವುದು ಬ್ಲ್ಯಾಕ್ ಫಂಗಸ್ ಗೆ ಕಾರಣವಾಗುತ್ತಿದೆ. ಹೆಚ್ಚಿನ ರೋಗಿಗಳಿಗೆ ಡಿಸ್ಚಾರ್ಜ್ ಆದ ನಂತರ ಇಮ್ಯುನೊಕೊಂಪ್ರೊಮೈಸ್ಡ್ ಮತ್ತು ಬ್ಲ್ಯಾಕ್ ಫಂಗಸ್ ಕಾಣಿಸಿಕೊಂಡಿದೆ


Share this Story:

Follow Webdunia kannada

ಮುಂದಿನ ಸುದ್ದಿ

ರಾಜೀವ್ಗಾಂಧಿ 77ನೇ ಜನ್ಮದಿನಾಚರಣೆ, ರಾಹುಲ್ ನಮನ