Select Your Language

Notifications

webdunia
webdunia
webdunia
webdunia

ಅಬಕಾರಿಯಿಂದ 2591 ಕೋಟಿ ರಾಜಸ್ವ ಸಂಗ್ರಹ

ಅಬಕಾರಿಯಿಂದ 2591 ಕೋಟಿ ರಾಜಸ್ವ ಸಂಗ್ರಹ
ಹಾಸನ , ಬುಧವಾರ, 6 ಮೇ 2020 (21:59 IST)
ಅಬಕಾರಿಯಿಂದ ಈ ಜಿಲ್ಲೆಯಲ್ಲಿ 2591.82 ಕೋಟಿ ರೂ. ರಾಜಸ್ವ ಸಂಗ್ರಹಣೆ ಮಾಡಲಾಗಿದೆ.

ಹಾಸನ ಜಿಲ್ಲೆಯ ಅಬಕಾರಿ ಇಲಾಖೆಯಿಂದ 2019-20 ನೇ ಸಾಲಿನ ಆರ್ಥಿಕ ವರ್ಷದಲ್ಲಿ  ಮದ್ಯ ಮಾರಾಟದಿಂದ ಹಾಗೂ ಜಿಲ್ಲೆಯಲ್ಲಿರುವ ಡಿಸ್ಟಿಲರಿ, ಬ್ರೀವರಿಯಿಂದ ಮತ್ತು ಅಬಕಾರಿ ಅಕ್ರಮಗಳ ಸಂಬಂಧ 2,301 ದಾಳಿ ನಡೆಸಿ, ಪ್ರಕರಣಗಳನ್ನು ದಾಖಲಿಸಿ ಆರೋಪಿಗಳನ್ನು ದಸ್ತಗಿರಿ ಮಾಡಲಾಗಿದೆ.

ಕೆಲವು ಪ್ರಕರಣಗಳನ್ನು ದಾಖಲಿಸಿದ್ದು, ಒಟ್ಟಾರೆ ಮದ್ಯ ಮಾರಾಟ ಹಾಗೂ ವಿವಿಧ ರೀತಿಯ ಸನ್ನದು ಶುಲ್ಕದಿಂದ 2591.82 ಕೋಟಿ ರೂ. ರಾಜಸ್ವ ಸಂಗ್ರಹಣೆ ಮಾಡಲಾಗಿದೆ ಎಂದು ಅಬಕಾರಿ ಉಪ ಆಯುಕ್ತರಾದ ಗೋಪಾಲಕೃಷ್ಣ ಗೌಡ ತಿಳಿಸಿದ್ದಾರೆ.

2,301 ದಾಳಿ ನಡೆಸಲಾಗಿದ್ದು, ಅದರಲ್ಲಿ 188 ಘೋರ, 4 ಎನ್.ಡಿ.ಪಿ.ಎಸ್. (ಗಾಂಜಾ), 852 ಲಘು, 402 ಸನ್ನದು ಷರತ್ತು ಉಲ್ಲಂಘನೆ, 494 ಆರೋಪಿಗಳನ್ನು ದಸ್ತಗಿರಿಗೊಳಿಸಲಾಗಿದೆ. 53 ವಾಹನಗಳು, 1901.123 ಲೀ. ಮದ್ಯ, 551.130 ಲೀ. ಬಿಯರ್, 231.000 ಲೀ. ಸೇಂದಿ, 76.000 ಲೀ. ಕಳ್ಳಭಟ್ಟಿ, 745.000 ಲೀ. ಬೆಲ್ಲದಕೊಳೆ ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಮುಂಬೈನಿಂದ ಈ ಜಿಲ್ಲೆಗೆ ಬಂತು ಕೊರೊನಾ ವೈರಸ್