Publish Date: Wed, 01 Apr 2020 (12:43 IST)
Updated Date: Wed, 01 Apr 2020 (12:44 IST)
ಲಾಕ್ ಡೌನ್ ನಿಂದಾಗಿ ಕುಡುಕರಿಗೆ ಮದ್ಯ ಸಿಗುತ್ತಿಲ್ಲ. ಹೀಗಾಗಿ ರೋಸಿಹೋದ ಕುಡುಕರು ಅಬಕಾರಿ ಇಲಾಖೆಗೆ ಕನ್ನ ಹಾಕಿ ಮದ್ಯವನ್ನು ಕಳ್ಳತನ ಮಾಡಿದ್ದಾರೆ.
ಬಳ್ಳಾರಿಯ ಸಿರಗುಪ್ಪ ಪಟ್ಟಣದಲ್ಲಿರುವ ಅಬಕಾರಿ ಇಲಾಖೆ ಕಚೇರಿಯಲ್ಲಿದ್ದ 25 ಸಾವಿರಕ್ಕೂ ಹೆಚ್ಚು ಮೌಲ್ಯದ ಮದ್ಯವನ್ನು ಕಳ್ಳತನ ಮಾಡಲಾಗಿದೆ.
ಕಚೇರಿಯ ಮೇಲಿನ ಹೆಂಚುಗಳನ್ನು ಕಿತ್ತು ಹಾಕಿ ತಡರಾತ್ರಿ ಮದ್ಯವನ್ನು ಕಳ್ಳತನ ಮಾಡಿ ಚಾಲಾಕಿತನವನ್ನು ಕಳ್ಳರು ಮೆರೆದಿದ್ದಾರೆ.
ಈ ಕುರಿತು ಸಿರಗುಪ್ಪಾ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.