Select Your Language

Notifications

webdunia
webdunia
webdunia
webdunia

24×36 ಅಡಿ ಅಗಲದ ರಾಷ್ಟ್ರಧ್ವಜ ಉದ್ಘಾಟನಾ ಕಾರ್ಯಕ್ರಮದಲ್ಲಿ ಎಡವಟ್ಟು

24×36 ಅಡಿ ಅಗಲದ ರಾಷ್ಟ್ರಧ್ವಜ ಉದ್ಘಾಟನಾ ಕಾರ್ಯಕ್ರಮದಲ್ಲಿ ಎಡವಟ್ಟು
bangalore , ಗುರುವಾರ, 26 ಜನವರಿ 2023 (15:33 IST)
74 ನೇ ಗಣರಾಜ್ಯೋತ್ಸವದ ಅಂಗವಾಗಿ ಬ್ರಿಗೇಡ್ ರಸ್ತೆಯ ಒಪೆರಾ ಜಂಕ್ಷನ್ ಬಳಿ ರಾಷ್ಟ್ರ ಧ್ವಜ ಉದ್ಘಾಟನೆ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.24×36 ಅಡಿ ಅಗಲದ ರಾಷ್ಟ್ರಧ್ವಜವನ್ನ  ಸಿಎಂ ಬೊಮ್ಮಾಯಿ‌ ಉದ್ಘಾಟಿಸಿದ್ರು.ಆದ್ರೆ ಈ ವೇಳೆ ಕಾರ್ಯಕ್ರಮದಲ್ಲಿ ಎಡವಟ್ಟು ಆಗಿದೆ.
 
ಸಿಎಂ ರಾಷ್ಟ್ರಧ್ವಜ ಹಾರಿಸಲು ಮುಂದಾದಾಗ  ಧ್ವಜ ಹಾರಿಲ್ಲ.ಗಂಟು ಬಿಚ್ಚಿ ಕೊಳ್ಳದ ಪರಿಣಾಮ ಧ್ವಜ ಹಾರಿಲ್ಲ.ರಾಷ್ಟ್ರ ಧ್ವಜಕ್ಕೆ ಸರಿಯಾಗಿ ಆಯೋಜಕರು ಹಗ್ಗ ಕಟ್ಟದ ಪರಿಣಾಮ ಬಹಳ ಹೊತ್ತು ಧ್ವಜ ಹಾರದೇ ಇತ್ತು.24×36 ಅಡಿ ಅಗಲದ ರಾಷ್ಟ್ರಧ್ವಜ ಉದ್ಘಾಟನಾ ಕಾರ್ಯಕ್ರಮದಲ್ಲಿ ಎಡವಟ್ಟು ಆಗಿದೆ.
 
ಬ್ರಿಗೇಡ್ ರಸ್ತೆಯ ಒಪೆರಾ ಜಂಕ್ಷನ್ ಬಳಿ  ಎಡವಟ್ಟು ನಡೆದಿದ್ದು,ಕೊನೆಗೆ ಧ್ವಜಸ್ತಂಭದಿಂದ ರಾಷ್ಟ್ರಧ್ವಜವನ್ನ ಆಯೋಜಕರು ಕೆಳಗೆ ಇಳಿಸಿ ಹಗ್ಗ ಗಂಟು ಬಿಡಿಸಿದಾರೆ.ನಂತರ ಮತ್ತೆ ಧ್ವಜವನ್ನು ಕೆಳಗಿಂದಲೇ ಬಿಡಿಸಿ ಹಾರಿಸಲಾಯ್ತು.ಸುಮಾರು 15 ನಿಮಿಷಗಳ ಕಾಲ ಧ್ವಜ ಹಾರಿಸಲು ಕಸರತ್ತು ಮಾಡಲಾಗಿದೆ.ಸಿಎಂ, ಶಾಸಕ ಹ್ಯಾರಿಸ್ ರಿಂದ ಹಗ್ಗ ಹಿಡಿದು ಪದೇ ಪದೇ ಜಗ್ಗುತ್ತಿದ್ದು ಧ್ವಜ ಹಾರಿಸಲು ಕಸರತ್ತು ಪಾಡುತ್ತಿದ್ರು.
 
ಇನ್ನೂ ಇಷ್ಟೇ ಅಲ್ಲದೆ ಸಿಎಂ ಎದುರೇ ಆಯೋಜಕರಿಂದ ಎರಡೆರಡು ಎಡವಟ್ಟು ಆಗಿದೆ.ಮೊದಲು ಗಂಟು ಕಟ್ಟಿಕೊಂಡಿದ್ದ ಧ್ವಜ ಹಾರದೇ ಎಡವಟ್ಟು ಮಾಡಿದ್ರು.ಬಳಿಕ ಅದೇ ಕಾರ್ಯಕ್ರಮದಲ್ಲಿ ರಾಷ್ಟ್ರಗೀತೆಗೂ ಅಪಮಾನ ಮಾಡಿದ್ರು.ಒಮ್ಮೆ ರಾಷ್ಟ್ರಗೀತೆ ಶುರುವಾಗಿ ಮೊಟಕು ಮಾಡಿದ್ದರು.ಬಳಿಕ ಎರಡನೇ ಸಲ ಪೂರ್ಣ  ರಾಷ್ಟ್ರಗೀತೆ ಗಾಯನ ಮಾಡಿದ್ದಾರೆ.ಈ ಮೂಲಕ ಒಂದೇ ಕಾರ್ಯಕ್ರಮದಲ್ಲಿ ಎರಡು ಎಡವಟ್ಟು ಮಾಡಿ ಅಪಮಾಮ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

JNU ವಿದ್ಯಾರ್ಥಿಗಳ ಮೇಲೆ ಕಲ್ಲು ತೂರಾಟ