Select Your Language

Notifications

webdunia
webdunia
webdunia
webdunia

ಭೂಗತ ಲೋಕದ ರೌಡಿಗಳಿಂದ ನಾವೆಲ್ಲ ಒಂದೇ ಎಂಬ ಸಂದೇಶ

A message from the underworld rowdies that we are all the same
bangalore , ಗುರುವಾರ, 26 ಜನವರಿ 2023 (15:17 IST)
ಬೆಂಗಳೂರು ರೌಡಿಪಾಳಯದಲ್ಲಿ ಪಾರುಪತ್ಯ ಸಾಧಿಸಿರೋ ರೌಡಿಗಳು ಅಂದ್ರೆ ಅದು ಸೈಲೆಂಟ್ ಸುನೀಲ, ವಿಲ್ಸನ್ ಗಾರ್ಡನ್ ನಾಗ ಮತ್ತು ಡಬಲ್ ಮೀಟರ್ ಮೋಹನ. ಸಿಟಿಯಲ್ಲಿ ಸುನೀಲ ಮತ್ತು ನಾಗ ಬದ್ದ ವೈರಿಗಳು ಒಬ್ಬರನ್ನೊಬ್ಬರು ಮುಗಿಸಲು ಹಪಹಪಿಸುತ್ತಿದ್ದಾರೆ ಅನ್ನೋ ಸುದ್ದಿ ಹಬ್ಬಿತ್ತು. ಇದೇ ಅನುಮಾನದ ಮೇರೆಗೆ ಸೈಲೆಂಟ್ ಸುನೀಲ, ನಾಗ ಹಾಗೂ ಮೋಹನನ್ನು ಸಿಸಿಬಿ ವಿಚಾರಣೆ ಕೂಡ ನಡೆಸಿತ್ತು. ಇದೇ ವಿಚಾರ ಎರಡೂ ಗ್ಯಾಂಗ್ ಹುಡುಗರ ನಡುವೆ ದ್ವೇಷಕ್ಕೂ ಕಾರಣವಾಗಿತ್ತು.  ಹಿಂದೆ ಕೂಡ ಸುನೀಲ‌ನ ಮೇಲೆ ನಾಗ ಅಟ್ಯಾಕ್ ಮಾಡಿಸಿದ್ದ, ನಾಗನ ಹತ್ಯೆಗೆ ಸುನೀಲ ಸ್ಕೆಚ್ ಹಾಕಿಸಿದ್ದ, ಬೆಂಗಳೂರು ಭೂಗತಲೋಕದ ಪಟ್ಟಕ್ಕೆರಲು ಇಬ್ಬರು ಪೈಪೋಟಿ ನಡೆಸ್ತಿದ್ದರೆ ಅನ್ನೋ ವಿಚಾರಕ್ಕೆ ಸದ್ಯ ಇಬ್ಬರು ರೌಡಿಗಳು ಫುಲ್ ಸ್ಟಾಪ್ ಇಟ್ಟಂಗೆ ಕಾಣ್ತಿದೆ. ಒಂದೇ ಫೋಟೋದಲ್ಲಿ ಸುನೀಲ,‌ನಾಗ ಮತ್ತು ಮೋಹನ ಫೋಜ್ ಕೊಟ್ಟು ನಾವೇಲ್ಲ ಒಂದೇ ನಮ್ಮಲ್ಲಿ ಯಾವೂದೇ ದುಶ್ಮಿನಿ ಇಲ್ಲ ಅನ್ನೋ ಮೆಸೇಜ್ ಪಾಸ್ ಮಾಡಿದ್ದಾರೆ. ಇತ್ತು ಈ ಫೋಟೋ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗ್ತಿದ್ದು ಎರಡೂ ಟೀಂ ಹುಡುಗರು ಕೂಡ ಫೋಟೋ ಶೇರ್ ಮಾಡ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಖೋಟು ನೋಟು ಚಲಾವಣೆ ಮಾಡ್ತಿದ್ದ ಆರೋಪಿಗಳ ಬಂಧನ