Select Your Language

Notifications

webdunia
webdunia
webdunia
webdunia

ಖೋಟು ನೋಟು ಚಲಾವಣೆ ಮಾಡ್ತಿದ್ದ ಆರೋಪಿಗಳ ಬಂಧನ

webdunia
bangalore , ಗುರುವಾರ, 26 ಜನವರಿ 2023 (15:14 IST)
ಖೋಟಾನೋಟು ಮುದ್ರಿಸಿ ರಾಜಧಾನಿಯಲ್ಲಿ ಚಲಾವಣೆಗೆ ಯತ್ನಿಸುತ್ತಿದ್ದ ನಾಲ್ವರು ಅಂತಾರಾಜ್ಯ‌ ಆರೋಪಿಗಳನ್ನ ಸುಬ್ರಮಣ್ಯಪುರ ಪೊಲೀಸರು ಬಂಧಿಸಿ 11 ಲಕ್ಷ ಮೌಲ್ಯದ ನಕಲಿ ನೋಟುಗಳನ್ನು ವಶಕ್ಕೆ ಪಡೆದ್ರೆ. ಮತ್ತೊಂದು ಕಡೆ ಗಾಂಜಾ ಮಾರಾಟ ಮಾಡುತ್ತಿದ್ದ ಖರ್ತನಾಕ್‌ ಗ್ಯಾಂಗ್ ನ್ನ ಖಾಕಿ ಪಡೆ ಅರೆಸ್ಟ್ ಮಾಡಿದ್ದಾರೆ.

ಆಂಧ್ರಪ್ರದೇಶದ ಕಡಪ ಜಿಲ್ಲೆಯ ಚರಣ್ ಸಿಂಗ್, ಪುಲ್ಲಲರೇವು, ರಾಜ ಹಾಗೂ ಗೋಪಿನಾಥ್ ಬಂಧಿತ ಆರೋಪಿಗಳು ಬಂಧಿತರಿಂದ 500 ಮುಖಬೆಲೆಯ 11 ಲಕ್ಷ ರೂಪಾಯಿ ನಕಲಿ ಹಣ,  ಖೋಟಾನೋಟು ಪ್ರಿಂಟ್ ಮಾಡುವ ಉಪಕರಣಗಳನ್ನ‌ ವಶಕ್ಕೆ‌ ಪಡೆದುಕೊಳ್ಳಲಾಗಿದೆ.‌ ಇದೇ ತಿಂಗಳು ಜನವರಿ 19 ರ ಮಧ್ಯಾಹ್ನ ಉತ್ತರಹಳ್ಳಿ‌ ಪೂರ್ಣಪ್ರಜ್ಞಾ ಲೇಔಟ್ ಬಳಿ ನಕಲಿ ನೋಟು ಚಲಾವಣೆಗೆ  ಯತ್ನಿಸುತ್ತಿದ್ದ ಮಾಹಿತಿ‌‌ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿದಾಗ 500 ರೂಪಾಯಿ ಮೌಲ್ಯದ 8 ಕಂತೆಗಳಲ್ಲಿ 818 ನೋಟುಗಳಿರುವ 4 ಲಕ್ಷ ಮೌಲ್ಯದ ನೋಟು ಜಪ್ತಿ ಮಾಡಿತ್ತು. ವಿಚಾರಣೆ ವೇಳೆ ಅನಂತಪುರದಲ್ಲಿ ನೋಟು ತಯಾರಿಸುವ ಜಾಗದ ಬಗ್ಗೆ ಆರೋಪಿಗಳು ನೀಡಿದ ಮಾಹಿತಿ ಮೇರೆಗೆ ಸ್ಥಳಕ್ಕೆ ಹೋಗಿ 6.25 ಲಕ್ಷ ಮೌಲ್ಯದ ನಕಲಿ ನೋಟು ಜಪ್ತಿ ಮಾಡಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರು ದಂಧೆಕೋರರನ್ನು ಬಸವನಗುಡಿ ಪೊಲೀಸರು ಬಂಧಿಸಿದ್ದಾರೆ.ನಾಗರಾಜ್ ಹಾಗೂ ನೋಗರಾಜ್ ಎಂಬುವರನ್ನು ಬಂಧಿಸಿ 44 ಲಕ್ಷ ಬೆಲೆಯ 116 ಕೆ.ಜಿ. ಗಾಂಜಾ ವಶಪಡಿಸಿಕೊಂಡ ವಶಕ್ಕೆ ಪಡೆದುಕೊಂಡಿದ್ದಾರೆ. ಆಂಧ್ರಪ್ರದೇಶದ ಕರಾವಳಿ ಭಾಗವಾಗಿರುವ ವಿಶಾಖಪಟ್ಟಣದಿಂದ ಗಾಂಜಾ ತರಿಸಿ‌ ಮಾರಾಟ ಮಾಡಲು ಆರೋಪಿಗಳು ಪ್ಲ್ಯಾನ್ ಮಾಡಿದ್ದರು.‌ ಇದರಂತೆ‌ ಲಕ್ಷಾಂತರ ಮೌಲ್ಯದ ಮಾದಕವಸ್ತು ತರಿಸಿಕೊಂಡು ನಗರದಲ್ಲಿ ಮಾರಾಟ ಮಾಡಲು ಯತ್ನಿಸುವಾಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಬಂಧಿತರಿಂದ ಹಣ ಹಾಗೂ ಗಾಂಜಾ ಎರಡು ಮೊಬೈಲ್ ಪೋನ್ ವಶಕ್ಕೆ‌ ಪಡೆದುಕೊಂಡು ಬಸವನಗುಡಿ ಪೊಲೀಸರು  ತನಿಖೆ ಚುರುಕುಗೊಳಿಸಿದ್ದಾರೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಬೆಂಗಳೂರಿನಲ್ಲಿ ಇನ್ಮುಂದೆ ಮೊಟ್ಟೆ ದುಬಾರಿ !