ಸೆಕ್ಸ್ ವಿಡಿಯೋದಿಂದ ಉದ್ರೇಕಗೊಂಡ 15 ವರ್ಷದ ಬಾಲಕ ಎಸಗಿದ ಕೃತ್ಯದ ಬಗ್ಗೆ ಕೇಳಿದ್ರೆ ಶಾಕ್ ಆಗ್ತೀರಾ

Webdunia
ಸೋಮವಾರ, 24 ಡಿಸೆಂಬರ್ 2018 (12:32 IST)
ಮುಂಬೈ : ತಂದೆಯ ಮೊಬೈಲ್ ನಲ್ಲಿ ಸೆಕ್ಸ್ ವಿಡಿಯೋ ನೋಡಿ ಉದ್ರೇಕಗೊಂಡ 15 ವರ್ಷದ ಬಾಲಕನೊಬ್ಬ 10 ವರ್ಷದ ಬಾಲಕನಿಗೆ ಲೈಂಗಿಕ ಕಿರುಕುಳ ನೀಡಿ ಕೊಲೆ ಮಾಡಿದ ಘಟನೆ ಮುಂಬೈನಲ್ಲಿ ನಡೆದಿದೆ.


ಕೊಲೆಯಾದ ಬಾಲಕ ಹಾಗೂ ಆರೋಪಿ ಬಾಲಕ ನೆರೆಹೊರೆ ಮನೆಯವರಾಗಿದ್ದು, ನೀಲಿ ಚಿತ್ರ ನೋಡಿ ಪ್ರೇರಿತನಾದ 15 ವರ್ಷದ ಬಾಲಕ ಸಂಜೆ ಟ್ಯೂಷನ್‍ ನಿಂದ ಮರಳುತ್ತಿದ್ದ 10 ವರ್ಷದ ಬಾಲಕನನ್ನು ತನ್ನ ಮನೆಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಲು ಮುಂದಾಗಿದ್ದಾನೆ. ಆಗ ಬಾಲಕ ಕಿರುಚಿಕೊಂಡಿದ್ದಕ್ಕೆ ಆತನ ಕುತ್ತಿಗೆಯನ್ನು ಬಿಗಿಯಾಗಿ ಹಿಡಿದಿದ್ದರಿಂದ ಉಸಿರುಗಟ್ಟಿಸಿ ಬಾಲಕ ಮೃತಪಟ್ಟಿದ್ದಾನೆ.


ಆಗ ಬಾಲಕನ ಉಡುಪುಗಳನ್ನು ಬಿಚ್ಚಿ ಶವವನ್ನು ಮಾತ್ರ ಟ್ರಾಲಿ ಬ್ಯಾಗ್‍ನಲ್ಲಿ ಇಟ್ಟು ಬಳಿಕ ಬಟ್ಟೆ ಹಾಗೂ ಸ್ಕೂಲ್ ಬ್ಯಾಗ್ ಅನ್ನು ಸಾರ್ವಜನಿಕ ಶೌಚಾಲಯದಲ್ಲಿ ಬಚ್ಚಿಟ್ಟು ತನಿಖೆಯ ದಿಕ್ಕು ತಪ್ಪಿಸಲು ಯತ್ನಿಸಿದ್ದಾನೆ. ನಂತರ ಬಾಲಕನ ಮೃತದೇಹವನ್ನು ತನ್ನ ಸ್ನೇಹಿತನ ಸ್ಕೂಟರ್ ಮೇಲೆ ಸಪೇದ್ ಪುಲ್ ನಾಲಾವರೆಗೂ ತೆಗೆದುಕೊಂಡು ಹೋಗಿ ನಾಲೆಯಲ್ಲಿ ಮೃತದೇಹ ಎಸೆದು ಪರಾರಿಯಾಗಿದ್ದಾನೆ.


ಇತ್ತ ಪೋಷಕರು ಮಗ ಕಾಣದೆ ಹುಡುಕಾಟ ಶುರು ಮಾಡಿದ್ದರು.  ಪ್ರಕರಣಕ್ಕೆ ತಿರುವು ನೀಡಲು ಆರೋಪಿ ಬಾಲಕ ಗೆಳೆಯನೊಂದಿಗೆ ಸೇರಿ ಬಾಲಕನನ್ನು ಕಿಡ್ನ್ಯಾಪ್ ಮಾಡಿರುವುದಾಗಿ ಆತನ ಪೋಷಕರಿಗೆ ಫೋನ್ ಮಾಡಿ ಹಣದ ಬೇಡಿಕೆ ಇಟ್ಟಿದ್ದಾನೆ.  ನಂತರ ಕೊಲೆಯಾಗಿದ್ದ ಬಾಲಕನ ಮೃತ ದೇಹವು ಸಪೇದ್ ಪುಲ್ ನಾಲಾದಲ್ಲಿ ತೇಲುತ್ತಿದ್ದ ಟ್ರಾಲಿ ಬ್ಯಾಗ್‍ನಲ್ಲಿ ಶನಿವಾರ ಪತ್ತೆಯಾಗಿತ್ತು.


ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದ ಪೊಲೀಸರು ಸಿಸಿಟಿವಿ ದೃಶ್ಯವನ್ನು ಪರೀಕ್ಷಿಸಿದಾಗ ಆರೋಪಿ ಬಾಲಕ ಸ್ಕೂಟರ್ ಮೇಲೆ ಟ್ರಾಲಿ ಬ್ಯಾಗ್ ಶವ ಸಾಗಿಸುತ್ತಿರುವುದು ಪತ್ತೆಯಾಗಿದೆ. ತಕ್ಷಣವೇ ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಆತ ಸತ್ಯಾಂಶ ಬಾಯ್ಬಿಟ್ಟಿದ್ದಾನೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕೆಲಸ ಹುಡುಕಿ ನಗರಕ್ಕೆ ಬಂದಿದ್ದ ಯುವಕ ಅನುಮಾನಸ್ಪದ ಸಾವು

ಬೆಳಗಾವಿ: ಮನೆಯಿಂದ ಕೊಳೆತ ವಾಸನೆ, ಬಾಗಿಲು ತೆರೆದಾಗ ಮಾಜಿ ಪತಿ ಪೊಲೀಸಪ್ಪನ ಕೃತ್ಯ ಬಟಾಬಯಲು

ರಾಜ್ಯಸಭಾ ಸದಸ್ಯರ ಅಪಾರ್ಟ್‌ಮೆಂಟ್‌ನಲ್ಲಿ ಭಾರೀ ಬೆಂಕಿ ಅವಘಡ, ನಿವಾಸಿ ಹೇಳಿದ್ದೇನು

ಲಂಚ ಪಡೆಯುತ್ತಿದ್ದಾಗಲೇ ಸಿಕ್ಕಿಬಿದ್ದ ಹಾನಗಲ್ ತಹಶೀಲ್ದಾರ್ ಕಚೇರಿ ಶಿರಸ್ತೆದಾರ, ಮತ್ತಿಬ್ಬರ ಬಂಧನ

ಮೊದಲ ಬಾರಿ ಹಾಸನಾಂಬ ದೇವಿ ದರ್ಶನ ಪಡೆದ ಸಿಎಂ ಸಿದ್ದರಾಮಯ್ಯ ಪತ್ನಿ

ಮುಂದಿನ ಸುದ್ದಿ