Select Your Language

Notifications

webdunia
webdunia
webdunia
webdunia

15 ಕ್ಷೇತ್ರಗಳ ಉಪಚುನಾವಣೆ ಹಿನ್ನಲೆ; ಕಾಂಗ್ರೆಸ್- ಬಿಜೆಪಿ ನಡುವೆ ಟ್ವೀಟ್ ವಾರ್

15 ಕ್ಷೇತ್ರಗಳ ಉಪಚುನಾವಣೆ ಹಿನ್ನಲೆ; ಕಾಂಗ್ರೆಸ್- ಬಿಜೆಪಿ ನಡುವೆ ಟ್ವೀಟ್ ವಾರ್
ಬೆಂಗಳೂರು , ಗುರುವಾರ, 5 ಡಿಸೆಂಬರ್ 2019 (10:43 IST)
ಬೆಂಗಳೂರು : ರಾಜ್ಯದಾದ್ಯಂತ ತೀವ್ರ ಕುತೂಹಲ ಮೂಡಿಸಿದ 15 ಕ್ಷೇತ್ರಗಳ ಉಪಚುನಾವಣೆ ಇಂದು ನಡೆಯುತ್ತಿದ್ದು, ಈ ನಡುವೆ ಕಾಂಗ್ರೆಸ್- ಬಿಜೆಪಿ ನಡುವೆ ಟ್ವೀಟ್ ವಾರ್ ನಡೆದಿದೆ.



ಕರ್ನಾಟಕದ ಜನತಾ ನ್ಯಾಯಾಲಯದಲ್ಲಿ ಅನರ್ಹ ಕಾಂಗ್ರೆಸ್  ಹಾಗೂ ಜೆಡಿಎಸ್ ಅನರ್ಹರು. ಉಪಚುನಾವಣೆಯಲ್ಲಿ ಅನರ್ಹರನ್ನು ತಿರಸ್ಕರಿಸಿ ಕರ್ನಾಟಕವನ್ನು ಉಳಿಸಿ ಎಂದು ರಾಜ್ಯ ಬಿಜೆಪಿ ಟ್ವೀಟ್ ಮಾಡಿದೆ.


ಇದಕ್ಕೆ ಪ್ರತಿಕ್ರಿಯಿಸಿದ ಕಾಂಗ್ರೆಸ್, ಕಾಂಗ್ರೆಸ್, ಜೆಡಿಎಸ್ ಪಕ್ಷದಿಂದ ಬಿಜೆಪಿಗೆ ಮಾರಾಟವಾದ ಅನರ್ಹರನ್ನು ತಿರಸ್ಕರಿಸಿ ಎಂದು ಬಿಜೆಪಿಯೇ ಕರೆ ಕೊಟ್ಟಿದೆ. ಆಪರೇಷನ್ ಕಮಲ ಕುದುರೆ ವ್ಯಾಪಾರದಿಂದ ಪ್ರಜಾಪ್ರಭುತ್ವಕ್ಕೆ ಸಂವಿಧಾನಕ್ಕೆ ಅಪಚಾರ.


ಸ್ವಾಭಿಮಾನಿ ಮತದಾರರು ಕರ್ನಾಟಕದ ಮರ್ಯಾದೆ ಉಳಿಸಲು ರಾಜಕೀಯ ಶುದ್ಧೀಕರಣಗೊಳಿಸಲು ಕರ್ನಾಟಕದ ಮರ್ಯಾದೆ ಉಳಿಸಿ ಎಂದು ಮನವಿ ಮಾಡಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ತಾಂತ್ರಿಕ ದೋಷದ ಹಿನ್ನಲೆ; ಹೊಸಕೋಟೆಯ ಚುನಾವಣಾ ಮತಗಟ್ಟೆಯಲ್ಲಿ ಮತದಾನ ಸ್ಥಗಿತ