Publish Date: Tue, 16 Jun 2020 (19:50 IST)
Updated Date: Tue, 16 Jun 2020 (19:52 IST)
ರಾಜ್ಯದ ಈ ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್ ಕೇಸ್ ಗಳ ಸಂಖ್ಯೆ ಒಂದು ಸಾವಿರದ ಗಡಿ ದಾಟಿದೆ.
ಈ ಹಿಂದೆ ತಬ್ಲಿಘಿಗಳಿಂದ ಸುದ್ದಿಯಾಗಿದ್ದ ಕಲಬುರಗಿಯಲ್ಲಿ ಈಗ ಮಹಾರಾಷ್ಟ್ರ ಪ್ರವಾಸ ಹಾಗೂ ವಿದೇಶಗಳಿಂದ ಬಂದವರಿಂದ ಹೊಸದಾಗಿ 63 ಕೊರೊನಾ ಪಾಸಿಟಿವ್ ದೃಢಪಟ್ಟಿವೆ.
ಆ ಮೂಲಕ 1007 ಕ್ಕೆ ಕೊರೊನಾ ಪಾಸಿಟಿವ್ ಕೇಸ್ ಗಳ ಸಂಖ್ಯೆ ತಲುಪಿದ್ದು, ಕಲಬುರಗಿ ರಾಜ್ಯದಲ್ಲಿಯೇ ಕೊರೊನಾ ವಿಷಯದಲ್ಲಿ ದ್ವಿತೀಯ ಸ್ಥಾನ ಪಡೆದಂತಾಗಿದೆ.
ಈವರೆಗೆ 10 ಜನರು ಕೊರೊನಾಗೆ ಬಲಿಯಾಗಿದ್ದರೆ, 474 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.
ಹೊಸದಾಗಿ 15 ಜನರು ಗುಣಮುಖರಾಗಿದ್ದು, 523 ಸಕ್ರಿಯ ಪ್ರಕರಣಗಳಿಗೆ ಚಿಕಿತ್ಸೆ ಮುಂದುವರಿದಿದೆ.