Select Your Language

Notifications

webdunia
webdunia
webdunia
webdunia

ಮೋದಿ ಸ್ವಾಗತಕ್ಕೆ 10 ಕ್ವಿಂಟಾಲ್​ ಹೂ ರೆಡಿ

10 quintals of water are ready to welcome Modi
Shivamogga , ಸೋಮವಾರ, 27 ಫೆಬ್ರವರಿ 2023 (17:21 IST)
ಪ್ರಧಾನಿ ನರೇಂದ್ರ ಮೋದಿ ಬೆಳಗಾವಿಯಲ್ಲಿ 10 ಕಿ.ಮೀ ಭರ್ಜರಿ ರೋಡ್​​​​ ಶೋನಲ್ಲಿ ಭಾಗವಹಿಸುತ್ತಿದ್ದಾರೆ. ರೋಡ್​ ಶೋ ವೇಳೆ ಹಾದಿಯುದ್ದಕ್ಕೂ ಲಕ್ಷಾಂತರ ಸಂಖ್ಯೆಯಲ್ಲಿ BJP ಕಾರ್ಯಕರ್ತರು ಸೇರಲಿದ್ದಾರೆ. ಇದೀಗ ಪ್ರಧಾನಿಯನ್ನು ಸ್ವಾಗತಿಸಲು ಕಾರ್ಯಕರ್ತರು ಭರ್ಜರಿ ಸಿದ್ಧತೆ ಮಾಡಿಕೊಂಡಿದ್ದಾರೆ. 10 ಕ್ವಿಂಟಾಲ್​​​ ಹೂವನ್ನು ಸಿದ್ದಗೊಳಿಸಿದ್ದಾರೆ. ಶಾಸಕ ಅಭಯ ಪಾಟೀಲ್ ನೇತೃತ್ವದಲ್ಲಿ ನಿನ್ನೆ ರಾತ್ರಿಯಿಂದ ಸಿದ್ದತೆ ಕಾರ್ಯ ನಡೆಯುತ್ತಿದ್ದು, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕೈಜೋಡಿಸಿದ್ದಾರೆ. ಕುಂದಾನಗರಿಗೆ ಪ್ರಧಾನಿ ನರೇಂದ್ರ ಮೋದಿ ಆಗಮನ ಹಿನ್ನೆಲೆ 2 ಲಕ್ಷಕ್ಕೂ ಅಧಿಕ ಕಾರ್ಯಕರ್ತರು ಸೇರುವ ನಿರೀಕ್ಷೆ ಇದೆ. ಹೀಗಾಗಿ ಲಕ್ಷಾಂತರ ಮಂದಿಗೆ ಊಟದ ವ್ಯವಸ್ಥೆ ಮಾಡಲಾಗಿದ್ದು, ಬಗೆಬಗೆಯ ಖಾದ್ಯಗಳು ತಯಾರಾಗುತ್ತಿವೆ. ನಾಲ್ಕು ಕಡೆ ಊಟ ಹಾಗೂ ಉಪಹಾರದ ವ್ಯವಸ್ಥೆಯಿದ್ದು, ಬೆಳಗಿನ ಉಪಹಾರಕ್ಕೆ ಉಪ್ಪಿಟ್ಟು, ಮಧ್ಯಾಹ್ನದ ಊಟಕ್ಕೆ ಹಾಲು ಉಗ್ಗಿ, ಬದನೆ ಕಾಯಿಪಲ್ಯ ಹಾಗೂ ಅನ್ನ ಸಾಂಬರ್ ವ್ಯವಸ್ಥೆ ಮಾಡಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮೋದಿ, BSYಗೆ ಸನ್ಮಾನ