Publish Date: Wed, 20 Dec 2023 (18:30 IST)
Updated Date: Wed, 20 Dec 2023 (19:24 IST)
ಭಾರೀ ಮಳೆಗೆ ತತ್ತರಿಸಿರುವ ದಕ್ಷಿಣ ತಮಿಳುನಾಡಿನ ಕನ್ಯಾ ಕುಮಾರಿ, ತಿರುನೆಲ್ವೇಲಿ, ತೂತ್ತುಕುಡಿ ಮತ್ತು ತೆಂಕಾಸಿಗಳಲ್ಲಿ ಮಳೆ ಕಡಿಮೆಯಾಗಿದೆಯಾದರೂ ಪ್ರವಾಹ ಸ್ಥಿತಿ ಮುಂದು ವರೆದಿದ್ದು 10 ಮಂದಿ ಸಾವನ್ನಪ್ಪಿದ್ದಾರೆ. ಮಳೆಯಿಂದಾಗಿ ತೂತ್ತುಕುಡಿ ರೈಲು ನಿಲ್ದಾಣದಲ್ಲಿ ಸಿಲುಕಿದ್ದ 800 ಮಂದಿ ಪೈಕಿ 300 ಜನರನ್ನು ಸುರಕ್ಷಿತವಾಗಿ ಸ್ಥಳೀಯ ಶಾಲೆಗೆ ಸ್ಥಳಾಂತರಿಸಲಾಗಿದೆ ಅಂತಾ ಮಾಹಿತಿ ಲಭ್ಯವಾಗಿದೆ.