Select Your Language

Notifications

webdunia
webdunia
webdunia
webdunia

ಬ್ರಾಹ್ಮಣ ಅಭಿವೃದ್ಧಿ ನಿಗಮಕ್ಕೆ 10 ಕೋಟಿ ಅನುದಾನ : ಬೊಮ್ಮಾಯಿ ಭರವಸೆ

ಬಜೆಟ್
ಬೆಂಗಳೂರು : ಆರ್ಯ ವೈಶ್ಯ ನಿಗಮ ಮಂಡಳಿ ಮತ್ತು ಬ್ರಾಹ್ಮಣ ನಿಗಮ ಮಂಡಳಿಗೆ ಈ ಬಜೆಟ್ ನಲ್ಲಿ ತಲಾ 10 ಕೋಟಿ ಅನುದಾನ ನೀಡುತ್ತೇನೆ.

ಸ್ಥಗಿತಗೊಂಡಿರೋ ವಿದ್ಯಾರ್ಥಿ ವೇತನ ಬಿಡುಗಡೆಗೂ ಆದೇಶ ನೀಡುತ್ತೇನೆ ಅಂತಾ ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ. ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಜೆಡಿಎಸ್ನ ಸದಸ್ಯರ ಪ್ರಶ್ನೆಗೆ ಉತ್ತರಿಸಿ ಅವರು ಮಾತನಾಡಿದರು.

ಆರ್ಯ ವೈಶ್ಯ ನಿಗಮ ಮತ್ತು ಬ್ರಾಹ್ಮಣ ನಿಗಮಕ್ಕೆ ಸರಿಯಾಗಿ ಅನುದಾನ ನೀಡುತ್ತಿಲ್ಲ. ಹೆಚ್ಚು ಅನುದಾನಕ್ಕೆ ಮನವಿ ಮಾಡಿದ್ದೇವೆ. ಆದರೂ ಅನುದಾನ ಕೊಟ್ಟಿಲ್ಲ. ಎರಡು ಸಮಾಜಕ್ಕೂ ಈ ಸರ್ಕಾರ ಅನ್ಯಾಯ ಮಾಡಿದೆ.

ಕುಮಾರಸ್ವಾಮಿ ಸಿಎಂ ಆಗಿದ್ದಾಗ 100 ಕೋಟಿ ಅನುದಾನ ಬಿಡುಗಡೆ ಮಾಡಿದ್ದರು. ಕಾಮನ್ ಸಿಎಂ ಎಲ್ಲಾ ವರ್ಗಕ್ಕೂ ಕಾಮನ್ ಸಿಎಂ ಆಗಿ ಕೆಲಸ ಮಾಡಬೇಕು ಆಗ್ರಹಿಸಿದರು.  ಆರ್ಯ ವೈಶ್ಯ ನಿಗಮ ಮತ್ತು ಬ್ರಾಹ್ಮಣ ನಿಗಮಕ್ಕೆ ಈ ಬಜೆಟ್ ನಲ್ಲಿ ತಲಾ 10 ಕೋಟಿ ನೀಡುತ್ತೇನೆ ಎಂದು ಭರವಸೆ ನೀಡಿದರು. 

Share this Story:

Follow Webdunia kannada

ಮುಂದಿನ ಸುದ್ದಿ

ನಾನು ಮಚ್ಚು ಲಾಂಗು ಹಿಡಿದಿಲ್ಲ : ನಿಖಿಲ್ ಕುಮಾರಸ್ವಾಮಿ